ಹೊಳೆಬಾಗಿಲು ಸಿಗಂಧೂರು ಲಾಂಚ್ ಬಳಿ ಕ್ಯಾಂಟರ್ ಕ್ಲೀನರ್ ಕೆಳಗೆ ಬಿದ್ದು ಸಾವು

shivamogga
06/04/2023

ಶಿವಮೊಗ್ಗ: ಕಳೆದ ಜನವರಿ ತಿಂಗಳಲ್ಲಿ ಶರಾವತಿ ಹಿನ್ನೀರಿನಲ್ಲಿ ಸಾವೊಂದು
ನಡೆದ ಘಟನೆ ಇದೀಗ ಮೂರು ತಿಂಗಳ ಬಳಿಕ ಪ್ರಕರಣ ದಾಖಲಾಗಿದೆ.

ಶರಾವತಿ ಹಿನ್ನೀರಿನಲ್ಲಿ ಕ್ಯಾಂಟರ್ ನ ಮೇಲೆ ನಿಂತಿದ್ದ ಕ್ಲೀನರ್ ಹೇಮಂತು ಟರ್ಪಲ್ ಬಿಚ್ಚಲು ಹೋಗಿ ಬಿದ್ದು ಪ್ರಾಣಬಿಟ್ಟಿದ್ದನು. ಬಾಗಲಕೋಟೆಯ ಇಲಕಲ್ ತಾಲೂಕಿನಿಂದ ಕ್ಯಾಂಟರ್ ನ ಕ್ಲೀನರ್ ಆಗಿ ಬಂದಿದ್ದ ಹೇಮಂತ್ ಕ್ಯಾಂಟರ್ ಚಾಲಕ ಅಲ್ತಾಫ್ ನದಾಫ್ ಯಾನೆ ಚೌಧರಿಯ ನಿರ್ಲಕ್ಷದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ಜ.26 ರಂದು ಹೊಳೆಬಾಗಿಲಿನಿಂದ ಸಿಗಂದೂರಿಗೆ ಹೋಗುವಾಗ ಲಾಂಚ್ ಬಳಿ ಚಾಲಕ ಅಲ್ತಾಫ್ ನದಾಫ್ ಹೇಮಂತ್ ಗೆ ಟಾರ್ಪಲ್ ಬಿಚ್ಚಲು ಸೂಚಿಸಿದ್ದಾನೆ. ಕ್ಯಾಬಿನ್ ಮೇಲೆ ಹತ್ತಿದಾಗ ಚಾಲಕ ಹೇಮಂತ್ ನ್ನ ಗಮನಿಸದೆ ಏಕಾಏಕಿ ಚಲಾಯಿಸಿದ ಕಾರಣ ಕೆಳಗೆ ಬಿದ್ದಿದ್ದಾನೆ.

ಆತನನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ತ್ರೆಗೆ ದಾಖಲಿಸಲಾಗಿತ್ತು. ಜ.28 ರಂದು ಹೇಮಂತ್ ಅಸುನೀಗಿದ್ದನು. ಪ್ರಕರಣ ಬಾಗಲಕೋಟೆ ಇಲಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರನ್ನ ಈಗ ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಇಲಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಾಗರ ಗ್ರಾಮಾಂತರಕ್ಕೆ ವರ್ಗಾವಣೆಯಾಗಿದ್ದರಿಂದ ಈಗ ದೂರು ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version