ಬಂಟ್ವಾಳ: ಮನೆಯೊಂದಕ್ಕೆ ಸೋಮವಾರ ರಾತ್ರಿ ಸಿಡಿಲು ಬಡಿದು ಮನೆ ಛಾವಣಿ ವಿದ್ಯುತ್ ಪರಿಕಾರಗಳು ಹನಿಯಾಗಿರುವ ಘಟನೆ ತಾಲೂಕಿನ ವಿಟ್ಲ ಕಸಬ ಗ್ರಾಮದ ಅರಮನೆ ಬಳಿ ನಡೆದಿದೆ. ವೆಂಕಪ್ಪ ನಲಿಕೆ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಮನೆಯ ಗೋಡೆ ಬಿರುಕು ಬಿಟ್ಟು ವಿದ್ಯುತ್ ಪರಿಕಾರಗಳು ಹಾನಿಗೊಳಗಾಗಿವೆ. ಘಟನೆ ವೇಳೆ ಮನೆಯಲ್ಲಿ ವೆಂಕ...
ಉಡುಪಿಯಲ್ಲಿ ನಡೆದ ಮಿಸ್ ತುಳುನಾಡು ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಹಿತಾ ಸುವರ್ಣ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಉಡುಪಿಯ ಹೋಟೆಲ್ ಮಣಿಪಾಲ್ ಇನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ "ಮಿಸ್ ತುಳುನಾಡು" ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿತ...
ಬೆಳ್ತಂಗಡಿ: 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಕೆ.ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ ಹಾಗೂ ಯುವಕ ಮುಖಂಡ ರಕ್ಷಿತ್ ಶಿವರಾಂ ಟಿಕೆಟ್ ಗಾಗಿ ಬೆಂಗಳೂರಿಗೆ ತೆರಳಿ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ರಕ್ಷಿತ್ ...
ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಕಡಂಬು ಎಂಬಲ್ಲಿ ಯುವ ಉದ್ಯಮಿ ಶಶಿರಾಜ್ ಶೆಟ್ಟಿ ಅವರ ಮನೆಯ ಹಿಂಭಾಗ ಉಡ(Indian Monitor)ವೊಂದನ್ನು ಬೇಟೆಯಾಡಿದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಯಿತು. ಉದ್ಯಮಿ ಶಶಿರಾಜ್ ಶೆಟ್ಟಿಯವರ ಮನೆಯ ಹಿಂಭಾಗದಲ್ಲಿ ದೊಡ್ಡ ಗಾತ್ರದ ಉಡವನ್ನು ಬೃಹತ್ ಗಾತ್ರದ ಕಾಳಿಂಗ ಸರ್ಪ(King cobra)ವ...
ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ಎಂಬಲ್ಲಿ ನಡೆದಿದೆ. ಸಾಣೂರುಪದವು ಗಣೇಶ್ ಆದಿದ್ರಾವಿಡ ಎಂಬವರ ಪುತ್ರ ಕಾರ್ತಿಕ್ (16) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 9ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದ ವೇಳೆ ಸಿಡಿಲು ಬಡಿದು ಕಾರ್ತಿಕ್...
ಸ್ವ--ಸಹಾಯ ಸಂಘದ ಸಾಲ ಕಟ್ಟುವ ವಿಚಾರವಾಗಿ ಬೆದರಿಕೆ ಹಾಕಿ ಓರ್ವನ ಸಾವಿಗೆ ಕಾರಣವಾದ ಪ್ರಕರಣ ಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ್ (24) ಎಂಬವರಿಗೆ ಸಂಘದ ಸಾಲ ಕಟ್ಟುವ ವಿಚಾರದಲ್ಲಿ ಅದೇ ಸಂಘದ ನಾಲ್ಕು ಜನ ಬೆದರಿಕೆ ಹಾಕಿದ ಕಾರ...
ಉಡುಪಿ: ಉಡುಪಿ ನಗರದ ವಾದಿರಾಜ ರಸ್ತೆಯ ಮನೆಯ ಕೊಠಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹವು ಸುಟ್ಟ ಸ್ಥಿತಿಯಲ್ಲಿ ಇಂದು ಸಂಜೆ ಪತ್ತೆಯಾಗಿದೆ. ಮೃತರನ್ನು ವಾದಿರಾಜ ರಸ್ತೆಯ ನಿವಾಸಿ ರಾಜು ಗೋಪಾಲ್ ಸಾಮಗ (42) ಎಂದು ಗುರುತಿಸಲಾಗಿದೆ. ಕರ್ನಾಟಕ ಬ್ಯಾಂಕಿನ ಲೀಗಲ್ ಅಧಿಕಾರಿಯಾಗಿದ್ದ ಇವರು, ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣ ಸಾಮಗ ಅವರ ಮಗ. ...
ಪುತ್ತೂರು: ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ (ರಿ ) ವಿಟ್ಲ ವತಿಯಿಂದ ವಿಟ್ಲ ಮತ್ತು ಪುತ್ತೂರಿನ ಅಂಬೇಡ್ಕರ್ ಭವನಕ್ಕೆ ಮಂಜೂರಾದ ಜಮೀನಿನಲ್ಲಿ ಕೂಡಲೇ ಸಂಸ್ಥಾಪನೆ ನೆರವೇರಿಸಿ ಭವನ ನಿರ್ಮಿಸುವಂತೆ ಹಾಗೂ ಈ ಎರಡು ಭವನಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿ ದಲಿತ್ ಸೇವಾ ಸಮಿತಿ ವಿಟ್ಲ ಕಚೇರಿಯಿಂದ ಪುತ್ತೂರು ಶಾಸಕರ ಸಂಜೀವ ಮಠಂ...
ಮಂಗಳೂರಿನ ಸುರತ್ಕಲ್ ಟೋಲ್ ತೆರವಿಗಾಗಿನ ಹೋರಾಟ ಬೆಂಬಲಿಸಿ ಡಿವೈಎಫ್ಐ ಸಂಘಟನೆ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಮಂಗಳೂರು ನಗರ ಪೊಲೀಸರು ತಡೆ ಒಡ್ಡಿದ ಘಟನೆ ನಡೆದಿದೆ. ಸುರತ್ಕಲ್ ಟೋಲ್ ತೆರವು ಹೋರಾಟ ಬೆಂಬಲಿಸಿ ಡಿವೈಎಫ್ ಐ ಸಂಘಟನೆ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಯನ್ನು ನಡೆಸದಂತೆ ಪೊಲೀಸರು ತಡೆವೊಡ್ಡಿ ಕಾರ್ಯಕರ್ತರನ್ನು ವ...
ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಕಡೆಗಳಲ್ಲಿ ಕೆಂಗಣ್ಣು ಕಾಯಿಲೆ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವರ ಕಣ್ಣು ಇದ್ದಕ್ಕಿದ್ದಂತೆ ಕೆಂಪು ಕೆಂಪಾಗಿ ಕಾಣಿಸಿದ್ದು ಆತಂಕ ಮೂಡಿಸಿದೆ. ಇದು ಕೆಂಗಣ್ಣು ಎಫೆಕ್ಟ್. ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ ಹರಡುತ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ ಜನ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಕೆಂಗಣ್ಣ...