ಕಡಬ: ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡ ನಿವೃತ್ತ ಸೈನಿಕರೋರ್ವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ನಿವೃತ್ತ ಸೈನಿಕ ಗಂಗಾಧರ ಗೌಡ ಮೃತಪಟ್ಟವರಾಗಿದ್ದಾರೆ. ಕುಟ್ರುಪಾಡಿ ಗ್ರಾಮ ಪಂಚಾಯತ್ ವತಿಯಿಂದ ಹಳೆ ಸ್ಟೇಷನ್ ಅಮೃತ ಸರೋವರದ ಬಳಿ ನಿವೃತ್ತ...
75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಗಳೂರು ನಗರದ ನೆಹರು ಮೈದಾನದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮ...
ಉಡುಪಿ: ಕಲ್ಮಾಡಿಯಲ್ಲಿನ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮತ್ತು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವದ ಪ್ರಯುಕ್ತ ರವಿವಾರ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಆದಿಉಡುಪಿ ಜಂಕ್ಷನ್ ನಿಂದ ಕಲ್ಮಾಡಿ ಚರ್ಚಿನವರೆಗೆ ನಡೆಯಿತು. ಮೆರವಣಿಗೆಗೆ ಉಡುಪಿ ಶಾಸಕ ರಘು...
ಸೋಮವಾರ ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಭ್ರಮ. ಎಲ್ಲೆಲ್ಲೂ ತಿರಂಗಾವೇ ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕ್ಷೇತ್ರ ಕುದ್ರೋಳಿಯ ರಾಜಗೋಪುರದ ಮುಂಭಾಗದ ನೆಲದಲ್ಲಿ 900 ಕೆ.ಜಿ. ಧಾನ್ಯಗಳ ಬೃಹತ್ ತಿರಂಗ ರಚನೆಯಾಗಿದೆ. ಈ ಬೃಹತ್ ತಿರಂಗ 38 ಫೀಟ್ ಅಗಲವನ್ನು ಹೊಂದಿದೆ. ತಲಾ 300 ಕೆಜಿ ಮಸ್ಸೂರು ದಾಲ್,...
ವಿಟ್ಲ: ಜಾಗದ ವಿಷಯವಾಗಿ ವ್ಯಕ್ತಿಯೋರ್ವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಚಂದಳಿಕೆ ಸಮೀಪದ ಕುರುಂಬಲ ಎಂಬಲ್ಲಿ ನಡೆದಿದೆ. ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿ, ಹಲ್ಲೆಗೊಳಗಾದವರು. ಜಾಗದ ವಿಷಯವಾಗಿ ಜಗಳ ನಡೆದು ಮನೆಗೆ ಅಕ್ರಮ ಪ್ರವೇಶ ಮಾಡಿದ ಪುನೀತ್ ಜೋಗಿ ಮತ್ತು ತ್ಯಾಗರಾಜ್ ಎಂಬುವವರು ಲೋ...
ಮಂಗಳೂರು: ನಗರದ ಸುರತ್ಕಲ್ ಪೇಟೆಯಲ್ಲಿ ʼಸಾವರ್ಕರ್ ವೃತ್ತʼ ಎಂಬ ಹೆಸರಿನ ಅನಧಿಕೃತ ಬ್ಯಾನರ್ ಪ್ರತ್ಯಕ್ಷವಾಗಿದ್ದು ವಿಷ್ಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಅದನ್ನು ತೆರವುಗೊಳಿಸಿದ್ದಾರೆ. ಸುರತ್ಕಲ್ ನಿಂದ ಕೃಷ್ಣಾಪುರ ಕಡೆ ತಿರುವು ಪಡೆಯುವ ಮೇಲ್ಸೇತುವೆಯ ಅಡಿಯಲ್ಲಿ ಸಾವರ್ಕರ್ ಭಾವಚಿತ್ರ ಹಾಗೂ ಸಾವರ್ಕರ್ ವೃತ್ತ ಎಂಬ ಬ್ಯಾನರನ್ನು ...
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ದಿನಾಂಕ 13-08-2022 ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿ ಒಂದೇ ದಿನ ಒಟ್ಟು 20,444 ಪ್ರಕರಣಗಳನ್ನು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -34, ಚೆಕ್ಕು ಅಮಾನ್ಯ ಪ್ರಕರಣ-226, ಬ್ಯಾ...
ಮಂಗಳೂರು: ನಗರದ ಸುರತ್ಕಲ್ ನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಕುಟುಂಬಕ್ಕೆ ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ 1.20 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಯಿತು. ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ನೇತೃತ್ವದಲ್ಲಿ ಫಾಝಿಲ್ ಮನೆಗೆ ತೆರಳಿದ ಬಜ್ಪೆ ಜಮಾಅತ್ ನಿಯೋಗವು ಫಾಝಿಲ್ ರ ಮಗ್ಫಿರತ್ ಗಾಗಿ ಪ...
ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯಕ್ತ ಎಬಿವಿಪಿ ಮಂಗಳೂರು ಮಹಾನಗರದ ವತಿಯಿಂದ ಮಂಜೇಶ್ವರ ಗೋವಿಂದ ಪೈ ವೃತ್ತದಿಂದ ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ ಸ್ವತಂತ್ರ ಧ್ವಜವನ್ನು ಹಾರಿಸಿ ಹೋರಾಟ ಮಾಡಿದ ಬಾವುಟಗುಡ್ಡದವರೆಗೆ ಬೃಹತ್ ತಿರಂಗ ಯಾತ್ರೆಯನ್ನು ಮಾಡಲಾಯಿತು. ಸ್ವತಂತ್ರ ಭಾರತದ ಹೋರಾಟಕ್ಕಾಗಿ ಮೊದಲ ಸ್ವಾತಂತ್ರ ಧ್ವಜವನ...
ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಡೆದ ಮೂರೂ ಕೊಲೆಯನ್ನು ಎಸ್ ಡಿಪಿಐ ಪಕ್ಷ ಖಂಡಿಸುತ್ತದೆ. ಸದ್ಯ ಮೂರು ಕೊಲೆ ಆರೋಪಿಗಳ ಬಂಧನ ಆಗಿದೆ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನಾವು ಕೋರುತ್ತೇವೆ. ಆದರೆ, ಇಲ್ಲಿ ಹತ್ಯೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಹೇಳಿದರು. ಮಂಗಳೂರಿನಲ್ಲಿ...