ಪುತ್ತೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿದ ಮಾದಕ ವಸ್ತುಗಳ ಸೇವನೆ ವಿರೋಧಿ ಅಭಿಯಾನವು, ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಎಸ್ಸೆಸ್ಸೆಫ್ ಕೆಮ್ಮಾಯಿ ಶಾಖೆಯ ವತಿಯಿಂದ ಪೋಸ್ಟರ್ ಪ್ರದರ್ಶನ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ SSF ಬಳ್ಳಾರಿ ಜೆಲ್ಲೆ ಕ್ಯಾಂಪಸ್ ಕಾರ್ಯದರ್ಶಿ ಅಬೂಬಕ್ಕರ್ ಮರ್ಝುಖಿ ಸಖಾಫಿ ಮಾತನಾಡಿ...
ಯಾದಗಿರಿ: ಆರ್ ಟಿಒ ಅಧಿಕಾರಿಗಳೆಂದು ನಂಬಿಸಿ ವಾಹನ ಚಾಲಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಹಂದರಕಿ ಕ್ರಾಸ್ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ಆರ್ ಟಿಒ ಅಧಿಕಾರಿಗಳ ಸೋಗಿನಲ್ಲಿಯೇ ವಾಹನಗಳನ್ನು ತಡೆ...
ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯ ಬೆನ್ನಲ್ಲೇ ಜನರಿಗೆ ಮತ್ತೊಂದು ಶಾಕ್ ನೀಡಿದ್ದ ಬ್ಲ್ಯಾಕ್ ಫಂಗಸ್ ಹುಬ್ಬಳ್ಳಿಯಲ್ಲಿ 10 ಮಂದಿಯ ದೃಷ್ಟಿಯನ್ನು ಸಂಪೂರ್ಣವಾಗಿ ಕಿತ್ತುಕೊಂಡಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬಂದ ಈ ಬ್ಲ್ಯಾಕ್ ಫಂಗಸ್ ನಿಂದಾಗಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ 46 ಜನರಿಗೆ ದೃಷ್ಟಿ ದೋಷ ಕಂಡು ಬಂದಿತ್ತು. ...
ಪುತ್ತೂರು: ಅತ್ಯಾಚಾರ ನಡೆಸಿ ಪೊಲೀಸರ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯೋರ್ವ ಇದೀಗ ಅಪಘಾತಕ್ಕೀಡಾಗಿ ತಾನಾಗಿಯೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪಮನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮ ಎಂಬಾತ ತನ್ನ ಪತ್ನಿಯ ಅಕ್ಕನ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು, ಅತ್ಯಾಚಾರದ...
ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿರುವುದರ ವಿರುದ್ಧ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ರಶೀದ್ ಟಿಪ್ಪು ಎಂಬ ವ್ಯಕ್ತಿಯು ಮಾಡಿರುವ ಪೋಸ್ಟ್ ನಲ್ಲಿ ರಾಜಕೀಯ ಟೀಕೆಗಳು ಹಾಗೂ ವೈಯಕ್ತಿಕ ಅವಹ...
ಚಿಕ್ಕಮಗಳೂರು: ಅರ್ಚಕ ಹಾಗೂ ಅರ್ಚಕನ ಪುತ್ರನಿಗೆ ಜಮೀನು ವಿಚಾರದಲ್ಲಿ ನಡೆದ ಗಲಾಟೆಯ ಸಂದರ್ಭ ಚಪ್ಪಲಿಯಲ್ಲಿ ಥಳಿಸಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅರ್ಚಕ ಚೆನ್ನಕೇಶವಯ್ಯ ಮತ್ತು ಅವರ ಪುತ್ರ ರಂಗನಾಥ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ರಾಜಪ್ಪ, ಶೇಖರಪ್ಪ, ...
ರಾಣೆಬೆನ್ನೂರು: ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಜಾತಿ ಪೀಡಕನೋರ್ವ ಅಡ್ಡಿಪಡಿಸಿದ್ದರಿಂದ ದಲಿತ ಕುಟುಂಬವೊಂದು ಗ್ರಾಮ ಪಂಚಾಯತ್ ಎದುರೇ ಅಂತ್ಯಸಂಸ್ಕಾರ ನಡೆಸಲು ಮುಂದಾದ ಘಟನೆ ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಲಿತ ಕುಟುಂಬವೊಂದರ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ವೇಳೆ ಕುಟುಂಬಸ್ಥರು...
ಕೊಳ್ಳೇಗಾಲ: ಬಿಜೆಪಿ ಪರ ನಿಂತು ಪಾಲುದಾರಿಕೆ ಪಡೆದು ಸರ್ಕಾರ ರಚನೆಯಲ್ಲಿ ಪಾಲ್ಗೊಂಡ ಶಾಸಕ ಎನ್.ಮಹೇಶ್, ಬಿಜೆಪಿ ಸರ್ಕಾರದಲ್ಲಿ ದಲಿತ ಸಿಎಂ ಮಾಡುವಂತೆ ಧ್ವನಿ ಎತ್ತಿ, ಅವರ ತಾಕತ್ತು ಪ್ರದರ್ಶಿಸಲಿ ಎಂದು ಮಾಜಿ ಶಾಸಕ ಬಾಲರಾಜ್ ಸವಾಲು ಹಾಕಿದ್ದಾರೆ. ಕೊಳ್ಳೇಗಾಲ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ಅಂತ...
ಗೌರಿಬಿದನೂರು: ತಂದೆಯ ಹತ್ಯೆಗೆ ಸ್ವಂತ ಮಗನೇ ತನ್ನ ಸ್ನೇಹಿತರಿಗೆ ಸುಪಾರಿ ನೀಡಿರುವ ಘಟನೆ ತಾಲೂಕಿನ ಜೋಡಿಬಿಸಲಹಳ್ಳಿಯಲ್ಲಿ ನಡೆದಿದ್ದು, ತಂದೆಯನ್ನು ಹತ್ಯೆ ಮಾಡಲು ಪುತ್ರ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎಂದು ಇದೀಗ ತಿಳಿದು ಬಂದಿದೆ. ಜೂನ್ 14ರಂದು 59 ವರ್ಷ ವಯಸ್ಸಿನ ಬಿ.ಎನ್.ಶ್ರೀನಿವಾಸಮೂರ್ತಿ ಎಂಬವರನ್ನು ರೇಷ್ಮೆ ತೋಟಕ್ಕೆ ನೀ...
ಬಾಗಲಕೋಟೆ: ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ರಕ್ಷಿಸಲು ಮುಂದಾಗಿದ್ದ ಉರಗ ತಜ್ಞಗೆ ಹಾವು ಕಡಿದಿದ್ದು, ಪರಿಣಾಮವಾಗಿ ಅವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿಯ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ. 30 ವರ್ಷ ವಯಸ್ಸಿನ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ರಾತ್ರಿ ಗ್ರಾಮದಲ್ಲ...