ಬೆಂಗಳೂರು: ಫೆಬ್ರವರಿ 12 ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ, ಫೆಬ್ರವರಿ 16 ರಂದು ಬಜೆಟ್ ಮಂಡನೆಯಾಗಲಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ. ಫೆಬ್ರವರಿ 12 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಅಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಲಾಪಕ್ಕೆ ಯಾವುದೇ ಶಾಸಕ...
ಕೊಡಗು: ಯುವಕನೋರ್ವ ಎನರ್ಜಿ ಡ್ರಿಂಕ್ ರೆಡ್ ಬುಲ್ ಕುಡಿದ ನಂತರ ಅಸ್ವಸ್ಥವಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್(27) ಅಸ್ವಸ್ಥಗೊಂಡ ಯುವಕನಾಗಿದ್ದಾನೆ. ಮಡಿಕೇರಿಯ ಶಾಪ್ ವೊಂದರಿಂದ ಎನರ್ಜಿ ಡ್ರಿಂಕ್ ರೆಡ್ ಬುಲ್ ಖರೀದಿಸಿ ಕುಡಿದ ಬಳಿಕ ವಿನೋದ್ ಅಸ್ವಸ್ಥಗೊಂಡಿದ್ದ ಎನ್...
ಚಿಕ್ಕಮಗಳೂರು : ಕನ್ವೀನ್ಸ್ ಮಾಡಲು ಆಗದಿದ್ರೆ ಕನ್ಫ್ಯೂಸ್ ಮಾಡು, ಇಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ್ದು ಅದೇ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದರು. ಮುಖ್ಯಮಂತ್ರಿಗಳೇ, ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ತೆರಿಗೆ ಹಣ ಬಂದಿದೆ? 2004--2014ರವರೆಗೆ ಎಷ್ಟು ತೆರಿಗೆ ಹಣ ಬಂದು ಶ್ವೇತಪತ...
ರಾಮನಗರ: ರಾಜ್ಯದ ಪರವಾಗಿ ರಾಜ್ಯದಿಂದ ಗೆದ್ದಿರುವ ಬಿಜೆಪಿ ಸಂಸದರು ಯಾರೂ ಧ್ವನಿ ಎತ್ತಿಲ್ಲ, ಇದರ ಅರ್ಥ ಬಿಜೆಪಿ ಸಂಸದರು ಯಾರೂ ಗಂಡಸರು ಇಲ್ಲ ಎಂದು ಬಿಜೆಪಿ ಸಂಸದರ ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ನೀತಿಯ ವಿರುದ್ಧ ಬಿಜೆಪಿ ಸಂಸದರು ಧ್ವನಿ ಎತ್ತಿಲ್ಲ ...
ಕಲಬುರಗಿ: ಮದ್ಯದ ಅಮಲಿನಲ್ಲಿ ಕ್ಷುಲಕ ಕಾರಣಕ್ಕೆ ಹೆತ್ತ ತಾಯಿಯನ್ನೇ ಮಗ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಚಾವರಂನಲ್ಲಿ ನಡೆದಿದೆ. ಅನೀಲ್ ಎಂಬಾತ ಹೆತ್ತಮ್ಮನನ್ನು ಕೊಲೆಗೈದ ಆರೋಪಿಯಾಗಿದ್ದಾನೆ. ಮೃತರನ್ನು ಶೋಭಾ (45) ಎಂದು ಗುರುತಿಸಲಾಗಿದೆ.ಕೊಲೆ ಆರೋಪಿ ಅನೀಲ್ ನನ್ನು ...
ಉಳ್ಳಾಲ: ಕ್ರಿಕೆಟ್ ಪಂದ್ಯಾಟದ ವೇಳೆ ಬ್ಯಾಟ್ಸ್’ಮೆನ್ ಹೊಡೆದ ಚೆಂಡು ಮರದಲ್ಲಿದ್ದ ಜೀನಿನ ಗೂಡಿಗೆ ತಾಗಿದ್ದು, ಇದರಿಂದ ರೊಚ್ಚಿಗೆದ್ದ ಜೇನುನೊಣಗಳು ಕ್ರಿಕೆಟ್ ಗ್ರೌಂಡ್ ನಲ್ಲಿದ್ದವರ ಮೇಲೆ ಅಟ್ಟಾಡಿಸಿ ದಾಳಿ ನಡೆಸಿದ ಘಟನೆ ಉಳ್ಳಾಲದ ಒಂಭತ್ತುಕೆರೆ ಸಮೀಪ ನಡೆದಿದೆ. ಭಾನುವಾರ ಸೋಮವೇಶ್ವರದ ಒಂಭತ್ತುಕೆರೆಯ ಅನಿಲ ಕಾಂಪೌಂಡ್ ಎಂಬಲ್ಲಿ ಸ್ಥಳೀ...
ಮಂಗಳೂರು: ಪಣಂಬೂರು ಬೀಚ್ ನಲ್ಲಿ ಯುವಕ ಹಾಗೂ ಯುವತಿಯ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಪಿಲಾತಬೆಟ್ಟು ನಿವಾಸಿ ಪ್ರಶಾಂತ್ ಭಂಡಾರಿ(38), ಬೆಳ್ತಂಗಡಿ ಕರಾಯ ನಿವಾಸಿ ಉಮೇಶ್(23), ಬೆ...
ಚೆನ್ನೈ: ರೈಲಿನಲ್ಲಿ ತಂದೆಯ ಬ್ಯಾಗ್, ಮೊಬೈಲ್ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಗೂಗಲ್ ಮ್ಯಾಪ್ ನ ಸಹಾಯದಿಂದ ಮಗ ಪತ್ತೆ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಾಜಭಗತ್ ಎಂಬವರ ತಂದೆ ಭಾನುವಾರ ತಮಿಳುನಾಡಿನ ಕನ್ಯಾಕುಮಾರಿ ಬಳಿಯ ನಾಗರ್ ಕೋಯಿಲ್ ನಿಂದ ಕಾಚಿಗಾಡ್ ಎಕ್ಸ್ ಪ್ರೆಸ್ ರೈಲಿನಲ್ಲಿ ತಿರುಚನಾಪಳ್ಳಿಗೆ ತೆರಳುತ್ತಿದ್ದರು....
ಬೆಂಗಳೂರು: ಕರ್ನಾಟಕ ಸರ್ಕಾರದ ತೆರಿಗೆಯ ಪಾಲನ್ನು ಕೇಂದ್ರ ಸರ್ಕಾರ ನೀಡಿಲ್ಲ ಹೀಗಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ಇಡೀ ಕರ್ನಾಟಕ ಸರ್ಕಾರ ಧರಣಿ ನಡೆಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು. ಕರ್ನಾಟಕ ರಾಜ್ಯದ ಪಾಲಿನ ಹಣವನ್ನು ಕೇಂದ್ರ ಸರ್ಕಾರ ನೀಡ...
ಚಿಕ್ಕಬಳ್ಳಾಪುರ: ಭೀಕರ ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆ ಮೂಲದ ಲಕ್ಷ್ಮಣ (45) ಮೃತಪಟ್ಟವರು ಎಂದು ಹೇಳಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಹಾರೋಬಂಡೆ ಕ್ರಾಸ್ ಬಳಿ ಅಪರಿಚಿತ ವಾಹನ ಅಪಘಾತ ನಡೆಸಿ ಪರಾರಿಯಾಗಿದೆ. ಡಿಕ್ಕಿ ಹೊಡೆದ ವಾ...