ಹಾಸನ: ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಆನಂದ್ ಕುಮಾರ್ (42) ಪತ್ನಿಯಿಂದಲೇ ಕೊಲೆಯಾದ ವ್ಯಕ್ತಿ. ಪತ್ನಿ ಸುನಿತಾಳ ಆರೋಪಿಯಾಗಿದ್ದು, ಈಕೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ವಿವರ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ...
ಬೆಳಗಾವಿ: ರಾಮದುರ್ಗ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯದಲ್ಲಿ ಊಟ ಸೇವಿಸಿ 14ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಸ್ವಸ್ಥರಾಗಿದ್ದ 14 ವಿದ್ಯಾರ್ಥಿನಿಯರನ್ನು ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ದಾಖ...
ಚಾಮರಾಜನಗರ: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಬಿಜೆಪಿ ಕಾರಣವಾಗಿದ್ದು, ಮುಗ್ಧ ಮಕ್ಕಳನ್ನು ಬಳಸಿಕೊಂಡು ರಾಜ್ಯದಲ್ಲಿ ಕೋಮುದಳ್ಳುರಿ ಸೃಷ್ಟಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ವಿದ್ಯಾರ್ಥಿನಿಯರು ಹಿಂದಿನಿಂದಲೇ ಹಿಜಾಬ್ ಹಾಕಿಕೊಂಡೇ...
ಬೆಂಗಳೂರು: ಮಹಿಳೆಯರು ಹಾಕುವ ಬಟ್ಟೆಯಿಂದ ಪುರುಷರು ಉದ್ರೇಕವಾಗುತ್ತಾರೆ. ಮಹಿಳೆಯರ ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಕಿನಿಯಾಗಿರಲಿ, ಮುಸುಕು, ಜೀನ್ಸ್ ಆಗಿರಲಿ ಅಥವಾ ಹಿಜಬ್ ಆಗಿರ...
ಬೆಂಗಳೂರು: ವಾಯು ವಿಹಾರಕ್ಕೆ ತೆರಳಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಅವರ ಮೊಬೈಲ್ನ್ನು ಇಬ್ಬರು ಯುವಕರು ಕಸಿದು ಪರಾರಿಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ. ನಿನ್ನೆ ಬೆಳಗ್ಗೆ ಶೃತಿ ಖರ್ಗೆ ಅವರು ಸದಾಶಿವನಗರ 8ನೇ ಮುಖ್ಯರಸ್ತೆಯಲ್ಲಿ ಒಬ್ಬರೇ ವಾಕಿಂಗ್ ತೆರಳಿದ್ದ ವೇಳೆ ದ್ವಿಚಕ್ರದಲ್ಲಿ ಬಂದ ಕಳ್ಳರಿಬ್ಬರು...
ಬೆಂಗಳೂರು: ಮೃತಪಟ್ಟ ಗಂಡನ ನಕಲಿ ದಾಖಲೆ ಸಲ್ಲಿಸಿ ಮೂರು ಕೋಟಿ ವಿಮೆ ಕ್ಲೈಮ್ ಮಾಡಿಕೊಂಡ ಪತ್ನಿಯ ವಿರುದ್ಧ ಇನ್ಶ್ಯೂರೆನ್ಸ್ ಕಂಪೆನಿ ದೂರು ನೀಡಿದೆ. ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬವರು ಟಾಟಾ ಎಐಎ ಲೈಪ್ ಇನ್ಶ್ಯೂರೆನ್ಸ್ ಕಂಪೆನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕವಾಗಿ 51,777 ರೂ. ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ...
ಬೆಂಗಳೂರು: ಇಂಟರ್ ವ್ಯೂ ಮುಗಿಸಿ ಬರುತ್ತಿದ್ದ ಯುವಕನ ಮೇಲೆ, ದಂಡ ಪಾವತಿಸಿಲ್ಲ ಎಂಬ ಆರೋಪ ಹೊರಿಸಿ ಸಂಚಾರಿ ಪೊಲೀಸರೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಘಟನೆಯ ಪರಿಣಾಮ ಯುವಕನ ಕುತ್ತಿಗೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ವಿಜಯನಗರ ಸಂಚಾರಿ ಪೊಲೀಸರು ಈ ಕೌರ್ಯ ಮೆರೆದಿದ್ದಾರೆನ್ನಲಾಗಿದ್ದು, ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದ...
ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಲಾರಿ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶ ಮೂಲದ ಕಟ್ಟಿಗೆ ಲಾರಿ ದಾಂಡೇಲಿಯತ್ತ ತೆರಳಿತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಬೆಳಗ್ಗೆ ಮಂಜು ಕವಿದ ಸಮಯದಲ್ಲಿ ದುರ್ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿ...
ಹುಬ್ಬಳ್ಳಿ: ಹಳೆ ಮನೆಯ ಗೋಡೆ ತೆರವುಗೊಳಿಸುತ್ತಿರುವ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಘಂಟಿಕೇರಿಯ ಪಗಡಿ ಗಲ್ಲಿಯಲ್ಲಿ ನಡೆದಿದೆ. ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ನಿವಾಸಿ ಶಿವಪ್ಪ ಮುಂದಿನಮನಿ (60) ಮೃತ ವ್ಯಕ್ತಿ. ಇವರು ಮುಂದಿನಮನಿ ಗುತ್ತಿಗೆದಾರ ಗಣೇಶರಾವ್ ಶಿಂಧೆ ಎಂಬವರ ಬಳಿ ಕೆಲಸಕ್ಕೆ ಬಂದಿ...
ಬೆಂಗಳೂರು: ಉದ್ಯೋಗದ ಆಮಿಷವೊಡ್ಡಿ ಹೊರ ರಾಜ್ಯಗಳಿಂದ ಹೆಣ್ಣು ಮಕ್ಕಳನ್ನು ಕರೆ ತಂದು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದ ಮೂವರು ಆರೋಪಿಗಳನ್ನು ಆನೇಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆನೇಕಲ್-ಚಂದಾಪುರ ಮುಖ್ಯರಸ್ತೆಯಲ್ಲಿನ ಅಪಾರ್ಟ್ಮೆಂಟ್ ವೊಂದರಲ್ಲಿ ರೋಮ್ ಬಾಡಿಗೆ ಪಡೆದಿದ್ದ ಆರೋಪಿಗಳು ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳಲ್ಲಿನ ...