ಬೆಂಗಳೂರು: ಬಸ್ಸಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಸಿನಿಮಾ ಶೈಲಿಯಲ್ಲಿ ಮುತ್ತು ನೀಡಲು ಹೋದ ಯುವಕನಿಗೆ ಇದೀಗ ಸಂಕಷ್ಟ ಆರಂಭವಾಗಿದ್ದು, ಇದೀಗ ಮುತ್ತು ನೀಡಿ ಪರಾರಿಯಾದ ಯುವಕನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವರು ಬಸ್ಸಿನಲ್ಲಿ ಗಣಪತಿ ಹಬ್ಬದ ನಿಮಿತ್ತ ತಮ್ಮ ಊರಿಗೆ ಹೊರಟಿದ್ದರು. ಸೆ....
ಬೆಂಗಳೂರು: ವಿದ್ಯಾರ್ಥಿಯೊಬ್ಬನ ಮೃತದೇಹ ಬೆಂಗಳೂರಿನ ಸಂಜಯನಗರ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಇದು ಕೊಲೆಯೋ ಆತ್ಮಹತ್ಯೆಯೋ ಎನ್ನುವ ಶಂಕೆ ಮೂಡಿದೆ. ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಮೃತ ವಿದ್ಯಾರ್ಥಿ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಮೊಬೈಲ್ ...
ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನ 8ನೇ ತಿರುವಿನಲ್ಲಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದಿದ್ದು, ಕೆಲ ಕಾಲ ಸ್ಥಳೀಯರು ತೀವ್ರ ಆತಂಕಕ್ಕೀಡಾದ ಘಟನೆ ನಡೆದಿದ್ದು, ಆದರೆ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪರಾಗಿದ್ದಾರೆ. ಗುರುವಾರ ಸಂಜೆ ಉಜಿರೆಯಿಂದ ಮೂಡಿಗೆರೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, ಕಾರಿನ...
ಚಿಕ್ಕಮಗಳೂರು: ಮೈಸೂರಿನಲ್ಲಿ ದೇವಾಲಯ ಕೆಡವಿರುವ ಘಟನೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರಿಗೆ ಹಿಂದೂಪರ ಹೋರಾಟಗಾರರ ಹೋರಾಟದ ಬಿಸಿ ತಟ್ಟಿದ್ದು, ಸಂಸದರುಗಳಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಸ್ ನಿಲ್ದಾಣದ ಸಮೀಪ ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಸದರಿಗೆ...
ಬೆಂಗಳೂರು: 2023ಕ್ಕೆ ಜೆಡಿಎಸ್ ಪಕ್ಷವೇ ಇರಲ್ಲ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ. ಆದರೆ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರುವ ಸ್ಥಿತಿ ಬರಲಿದೆ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಗುಡುಗಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, 2023ಕ್ಕೆ ಜೆಡಿಎಸ್ ಪಕ್ಷವೇ ಇಲ್ಲ...
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನ ಕೆಪಿಟಿ ಜಂಕ್ಷನ್ ಬಳಿಯಲ್ಲಿ ನೂತನ ಫ್ಲೈಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 34.8 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ನಿರ್ಮಾಣವಾಗಲಿದ್ದು, ಶೀಘ್ರವೇ ಟೆಂಡರ್ ಕರೆಯಲಾಗು...
ದಾವಣಗೆರೆ: ತನ್ನ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡದೇ ನಾನು ಮದುವೆಯಾಗುವುದಿಲ್ಲ ಎಂದು ಯುವತಿಯೊಬ್ಬಳು ಶಪಥ ಮಾಡಿದ್ದು, ಈ ಸುದ್ದಿ ರಾಜ್ಯ ಮಾತ್ರವಲ್ಲದೇ ರಾಷ್ಟ್ರದಾದ್ಯಂತ ವ್ಯಾಪಿಸಿದ್ದು, ಇದೀಗ ಯುವತಿಯ ಹೇಳಿಕೆಯಿಂದಾಗಿ ದಾವಣಗೆರೆ ಜಿಲ್ಲಾಡಳಿತಕ್ಕೆ ಬಿಸಿಮುಟ್ಟಿದ್ದು, ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದಾರೆ. ದಾವಣಗೆರೆ ತಾಲೂಕಿನ ...
ಕುಮಟಾ: ನಾಯಿಯನ್ನು ಬೇಟೆಯಾಡಲು ಊರಿಗೆ ಬಂದ ಚಿರತೆಯೊಂದು, ಮನೆಯ ಅಂಗಳದಲ್ಲಿರುವ ನಾಯಿ ಪಂಜರದಲ್ಲಿ ಆಕಸ್ಮಿಕವಾಗಿ ಸೆರೆಯಾಗಿರುವ ಘಟನೆ ತಾಲ್ಲೂಕಿನ ಕಿಮಾನಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಇಲ್ಲಿನ ನಿವಾಸಿ ವಿಷ್ಣು ನಾಗಪ್ಪ ಹರಿಕಾಂತ ಅವರ ಮನೆಯ ನಾಯಿ ಮರಿ ಬೆಳಗಿನ ಜಾವ ಕಿರುಚಿಕೊಂಡಿದ್ದು ಕೇಳಿ ಮನೆಯವರು ಹೊರಗೆ ಬಂದು ನೋಡಿದರು. ಆಗ...
ಯಾದಗಿರಿ: ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ ಅತ್ಯಾಚಾರ ಕೂಡ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಅಪಹರಿಸಿದ್ದ ನಾಲ್ವರು ಹೊಲಕ್ಕೆ ಎಳೆದೊಯ್ದಿ...
ಬೆಂಗಳೂರು: ಮಕ್ಕಳಿಗೆ ಎರಡು ದಿನಗಳಿಗಿಂತ ಹೆಚ್ಚುಕಾಲ ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ, ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಮಕ್ಕಳ ಪೋಷಕರನ್ನು ಎಚ್ಚರಿಸಿದ್ದಾರೆ. ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ತಜ್ಞರ ಸಮಿತಿ ಸದಸ್ಯರು ಮತ್ತು ತಾಂತ್...