ಬಿಹಾರ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಸರಣಿ ಸೇತುವೆ ಕುಸಿತಕ್ಕೆ ಪ್ರತಿಕ್ರಿಯೆಯಾಗಿ ಬಿಹಾರ ಸರ್ಕಾರವು 14 ಎಂಜಿನಿಯರ್ ಗಳನ್ನು ಅಮಾನತುಗೊಳಿಸಿದೆ. ತನಿಖಾ ಸಮಿತಿಯು ತನ್ನ ಸಂಶೋಧನೆಗಳನ್ನು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿ...
ಬಹುಜನ ಸಮಾಜ ಪಕ್ಷದ ತಮಿಳುನಾಡು ಮುಖ್ಯಸ್ಥರನ್ನು ಚೆನ್ನೈನ ಅವರ ನಿವಾಸದ ಬಳಿ ಬೈಕಲ್ಲಿ ಬಂದ ಆರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಗರದ ಪೆರಂಬೂರ್ ಪ್ರದೇಶದಲ್ಲಿ ಬಿಎಸ್ಪಿ ಅಧ್ಯಕ್ಷ ಆರ್ಮ್ಸ್ಟ್ರಾಂಗ್ ಅವರನ್ನು ಅಪರಿಚಿತ ಗುಂಪೊಂದು ಕೊಚ್ಚಿ ಕೊಲೆ ಮಾಡಿದೆ. ಈ. ಘಟನೆಯ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಸ್ಥಳೀಯ ಪೊ...
ತೆಲಂಗಾಣದ ಬೈಂಸ ಗ್ರಾಮದಲ್ಲಿ ಮಸೀದಿಗೆ ನುಗ್ಗಿ ಇಮಾಮರನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆಯು ಸ್ಥಳೀಯವಾಗಿ ಭಾರಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಜುಲೈ ಮೂರರಂದು ರಾತ್ರಿ ಸ್ಥಳೀಯ ಜಾಮಿಯಾ ಮಸೀದಿಗೆ ನುಗ್ಗಿದ ಈ ಇಬ್ಬರು ದುಷ್ಕರ್ಮಿಗಳು ಇಮಾಮ ರಾದ ಅಬ್ದುಲ್ ಅಜೀಜ್ ಅವರ ಕಾಲರ್ ಪಟ್ಟಿ ಹಿಡಿದು ಥಳಿಸಿ...
ರಾಮಮಂದಿರದ ಪೂಜಾರಿಗಳ ಉಡುಪಿನಲ್ಲಿ ರಾಮಮಂದಿರ ಟ್ರಸ್ಟ್ ಬದಲಾವಣೆ ಮಾಡಿದೆ. ಕಾವಿ ಬಣ್ಣದ ಉಡುಪಿನ ಬದಲು ಹಳದಿ ಬಣ್ಣದ ಉಡುಪನ್ನು ಟ್ರಸ್ಟ್ ಪೂಜಾರಿಗಳಿಗೆ ನೀಡಿದೆ. ಈಗ ರಾಮಮಂದಿರ ಟ್ರಸ್ಟ್ ರಾಮನ ಗರ್ಭಗುಡಿಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ನು ರಾಮಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಈ ಡ್ರೆಸ...
ಜೈಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ ಆದರೂ ಇನ್ನೂ ಭಾರತದಲ್ಲಿ ತಮ್ಮ ಇಷ್ಟದ ಸಂಗಾತಿಯನ್ನು ವಿವಾಹವಾಗುವ ಸ್ವಾತಂತ್ರ್ಯವೂ ಯುವಕ—ಯುವತಿಯರಿಗೆ ಸಿಕ್ಕಿಲ್ಲ. ಕಾನೂನಿನ ಪ್ರಕಾರ ತಮ್ಮ ಇಷ್ಟದ ಪತಿ--ಪತ್ನಿಯನ್ನು ಹೊಂದಲು ವಯಸ್ಕರಿಗೆ ಹಕ್ಕು ಇದ್ದರೂ, ಅಘೋಷಿತ ಕಾನೂನು ವಿರೋಧಿ ನಿಯಮಗಳನ್ನು ಮಾಡಿಕೊಂಡಿರುವ ಅನಾಗರಿಕರ...
ಕಲ್ಕತ್ತಾ: ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ 25ಕ್ಕೂ ಹೆಚ್ಚು ಮಂದಿ ದೃಷ್ಠಿ ಕಳೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ರಾಜದಾನಿ ಕಲ್ಕತ್ತಾದ ಮೆಟಿಯಾಬ್ರೂಜ್ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಜೂನ್ 28 ಮತ್ತು ಜೂನ್ 29ರಂದು ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಒಟ್ಟು 25 ಮಂದಿಗೆ ದೃಷ್ಟಿ ದೋಷ ಉಂಟಾಗಿದೆ ಎನ್ನಲಾಗ...
ತೆಲಂಗಾಣ: ಪೆನ್ನು ಚುಚ್ಚಿದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿ ನಡೆದಿದೆ. ರಿಯಾನ್ಸಿಕಾ ಮೃತ ಬಾಲಕಿಯಾಗಿದ್ದು ಬೆಡ್ ಮೇಲೆ ಆಟವಾಡುತ್ತಿದ್ದಾಗ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಕೈಯಲ್ಲಿದ್ದ ಪೆನ್ನು ರಭಸವಾಗಿ ಬಾಲಕಿಯ ಕಿವಿಯ ಮೇಲ್ಭಾಗಕ್ಕೆ ನುಗ್ಗಿತ್ತು. ಪರಿಣಾಮವಾಗಿ...
ಜಮ್ಮುವಿನಲ್ಲಿ ಒಂಬತ್ತು ತಿಂಗಳಿನಿಂದ ಕಾಣೆಯಾಗಿದ್ದ 22 ವರ್ಷದ ತೇಜಸ್ವಿನಿ ಎಂಬ ಮಹಿಳೆಯನ್ನು ಆಂಧ್ರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ. ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಚಾವರಂನ ವಿದ್ಯಾರ್ಥಿನಿ ತೇಜಸ್ವಿನಿ 2023 ರ ಅಕ್ಟೋಬರ್ 28 ರಂದು ನಾಪತ್...
ಪಶ್ಚಿಮ ಬಂಗಾಳದ 2022 ರ ಭೂಪತಿನಗರ ಸ್ಫೋಟ ಪ್ರಕರಣದಲ್ಲಿ ಆರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಸ್ಫೋಟದಲ್ಲಿ ಸಾವನ್ನಪ್ಪಿದ ಮೂವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಕೊಲ್ಕತ್ತಾದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶೀಟ್ ನಲ್ಲಿ ಮೃತರನ್ನು ರಾಜ್ ಕುಮಾರ್ ಮನ...
ಸಿಪಿಐ(ಎಂ) ಮತ್ತು ಕಾಂಗ್ರೆಸ್ ನ ವಿದ್ಯಾರ್ಥಿ ಘಟಕಗಳಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ ಎಫ್ ಐ) ಮತ್ತು ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್ ಯು) ನಡುವೆ ಇತ್ತೀಚೆಗೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ನಡುವೆ ತೀವ್ರ ವಾಗ್ವಾದ...