ಮಣಿಪುರ: ಮಣಿಪುರ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಷಯವಾಗಿ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯನ್ನು ಲೂಟಿ ಮಾಡಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕಾಂಗ್ರೆಸ್ನಿಂದ ವಲಸೆ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂಬುದು ಬಿಜೆಪಿ ಕಾರ್ಯಕರ್ತರ ...
ನವದೆಹಲಿ: ಖಾಸಗೀಕರಣ ನೀತಿ ವಿರೋಧಿಸಿ ಫೆ. 1ರಂದು ವಿದ್ಯುತ್ ಕ್ಷೇತ್ರದ ನೌಕರರು ದೇಶವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್ಗಳ ಒಕ್ಕೂಟ (ಎ ಐ ಪಿಎಫ್) ತಿಳಿಸಿದೆ. ವಿದ್ಯುತ್ ಕ್ಷೇತ್ರದ ನೌಕರರ, ಎಂಜಿನಿಯರ್ಗಳ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್ಸಿಸಿಒಇಇಇ) ಕರೆ ನೀಡಿರುವಂತೆ, ಕೇಂದ್ರ ಸರ್ಕಾ...
ತೆಲಂಗಾಣ: ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಕಾರು ಚಲಾಯಿಸಿದ ಪರಿಣಾಮ 16 ವರ್ಷ ವಯಸ್ಸಿನ ಬಾಲಕಿ ಸೇರಿದಂತೆ ನಾಲ್ವರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಅಪಘಾತಕ್ಕೆ ಕಾರಣವಾದ ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತ ವಯಸ್ಕರಿದ್ದರು ಎನ್ನಲಾಗಿದೆ. ಈ ಪೈಕಿ ಓರ್ವ ...
ಜೈಪುರ: 25 ವರ್ಷದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಅಮಾನವಿಯ ಘಟನೆ ರಾಜಸ್ತಾನದ ಚೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಜನವರಿ 27ರಂದು ಎಸ್ ಯು ವಿಯಲ್ಲಿ ರುಕ್ಸಾರ್ ಗ್ರಾಮದ ರಾಕೇಶ ಮೇಘವಾಲ್ ಎಂಬ ಸಂತ್ರಸ್ತ ಯುವಕನ ಮನೆಗೆ ಬಂದ 8 ಜನರ ಗುಂಪು ಈ ಅಮಾನವೀಯ ಕೃತ್ಯ ಎ...
ನವದೆಹಲಿ: ತಾಯಿ ಪೊಲೀಸರಿಗೆ ದೂರು ಕೊಡುತ್ತಾಳೆ ಎಂದು ಹೆದರಿ ಪುತ್ರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಗುರುಗ್ರಾಮ್ ಸೆಕ್ಟರ್ ನ ಗಾಂಧಿ ನಗರದಲ್ಲಿ ನಡೆದಿದೆ. ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ತಾಯಿಯ ಜೊತೆಗೆ ಜಗಳ ಮಾಡಿದ್ದ ಮಗ, ಜಗಳ ತೀವ್ರಗೊಂಡು ತಾಯಿಗೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ತಾಯಿ ಪೊಲೀಸರಿಗೆ ದೂರು ನ...
ಭೋಪಾಲ್: 10 ಜನರಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ನೀರುಪಾಲಾಗಿರುವ ಘಟನೆ ಮಧ್ಯಪ್ರದೇಶದ ಸಿಂಧ್ ನದಿಯಲ್ಲಿ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ವರದಿಗಳ ಪ್ರಕಾರ ಧಾರ್ಮಿಕ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ದೋಣಿಯಲ್ಲಿ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ...
ಮುಂಬೈ: ಕಳೆದ ಕೆಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ಮಾದಕ ದ್ರವ್ಯ ಮಾರಾಟ ದಂಧೆಕೋರನೊಬ್ಬನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿ ಬಿ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನೆರೆಹೊರೆಯವರಾದ ಸಾಹಿಲ್ ಶಾ ಅಲಿಯಾಸ್ ಫ್ಲಾಕೊ (31) ದುಬೈನಿಂದ ಮುಂಬೈಗೆ ಮರಳಿದ ನಂತರ...
ಲಕ್ನೋ: ಬಿಜೆಪಿ ಕಾರ್ಯಕರ್ತರು ಕರಪತ್ರಗಳನ್ನು ಹಂಚುವ ಮೂಲಕ ಕೋವಿಡ್ -19 ಸೋಂಕು ಹರಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಮುಜಾ ಫರ್ ನಗರದಲ್ಲಿ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಚೌ ಧರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್ ಯಾದವ್ ಈ ಹೇ...
ಮಹಾರಾಷ್ಟ್ರ: ರೈಲ್ ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ನಂದೂರ್ಬಾರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಗಾಂಧಿಧಾಮ್ ಎಕ್ಸ್ ಪ್ರೆಸ್ ರೈಲ್ ನ ಬೋಗಿಯಲ್ಲಿ ಬೆಳಗ್ಗೆ 10.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೋಗಿ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಯಾವುದೇ ಪ್ರಾಣಾಪಾಯದ ...
ಮಧ್ಯಪ್ರದೇಶ: ನದಿಯಲ್ಲಿ ಬೋಟ್ ಮಗುಚಿ ಹದಿಹರೆಯದ ಹುಡುಗ ಮತ್ತು ಹುಡುಗಿ ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಸಿಂಧ್ ನದಿಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೋಟ್ ನಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದು, ಕೆಲವರು ಈಜಿಕೊಂಡು ದಡ ಸೇರಿದರೆ, ಮತ್ತೆ ಕೆಲವರನ್ನು ರಕ್ಷಿಸಲಾಗಿದೆ. ಆದರೆ ದ್ರ...