1:41 PM Thursday 16 - October 2025

ಕಾರು ಚಲಾಯಿಸಿದ ಬಾಲಕ: ಫುಟ್ಪಾತ್ ನಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರ ದಾರುಣ ಸಾವು

car
31/01/2022

ತೆಲಂಗಾಣ: ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಕಾರು ಚಲಾಯಿಸಿದ ಪರಿಣಾಮ 16 ವರ್ಷ ವಯಸ್ಸಿನ ಬಾಲಕಿ ಸೇರಿದಂತೆ ನಾಲ್ವರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.

ಅಪಘಾತಕ್ಕೆ ಕಾರಣವಾದ ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತ ವಯಸ್ಕರಿದ್ದರು ಎನ್ನಲಾಗಿದೆ. ಈ ಪೈಕಿ ಓರ್ವ ಬಾಲಕ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಏಕಾಏಕಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಫುಟ್ಪಾತ್ ಹತ್ತಿದ್ದು, ಫುಟ್ಪಾತ್ ನಲ್ಲಿ ಕುಳಿತಿದ್ದ 16 ವರ್ಷದ ಬಾಲಕ ಸೇರಿದಂತೆ 27ರಿಂದ 32 ವರ್ಷದೊಳಗಿನ ಮಹಿಳೆಯರ ಮೇಲೆ ಕಾರು ಹರಿದಿದೆ.

ವರದಿಗಳ ಪ್ರಕಾರ ಸ್ಟೇರಿಂಗ್ ಹಿಡಿದಿದ್ದ ಬಾಲಕ ಕಣ್ಣುಜ್ಜಿಕೊಳ್ಳುತ್ತಿದ್ದ ವೇಳೆ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಬ್ರೇಕ್ ಬದಲು ಎಕ್ಸಿಲೇಟರ್ ಪ್ರೆಸ್ ಮಾಡಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತದ ಬಳಿಕ ಕಾರಿನಲ್ಲಿದ್ದ ಬಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರಿನಲ್ಲಿದ್ದ ಬಾಲಕರೆಲ್ಲರೂ ೯ನೇ ತರಗತಿಯ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಮೂವರು ಅಪ್ರಾಪ್ತರ ವಿರುದ್ಧ ಐಪಿಸಿ ಸೆಕ್ಷನ್ 304ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡ್ರೈವ್ ಮಾಡುತ್ತಿದ್ದ ಬಾಲಕನ ತಂದೆಯ ವಿರುದ್ಧವೂ ಕೇಸ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಸ್ತೆಯ ಗುಂಡಿಗೆ ಮತ್ತೊಂದು ಬಲಿ: ನಿಲ್ಲದ ರಕ್ತದಾಹ

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾನ ಕೊಲೆ ಮಾಡಬೇಕಿತ್ತು, ಗಾಂಧಿಯನ್ನಲ್ಲ | ಬಿ.ಕೆ.ಹರಿಪ್ರಸಾದ್

ನಡು ರಸ್ತೆಯಲ್ಲಿ ತನ್ನ ವಾಹನಕ್ಕೆ ತಾನೇ ಬೆಂಕಿ ಹಚ್ಚಿದ ಮಾಲಿಕ!

ಹಲಗೆ ಬಾರಿಸಿದ್ದಕ್ಕೆ ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ಯುವಕರು

ಇತ್ತೀಚಿನ ಸುದ್ದಿ

Exit mobile version