ಡೋಕ್ಸುರಿ ಚಂಡಮಾರುತದ ಅಬ್ಬರ ಜೋರಾಗಿದೆ. ದಕ್ಷಿಣ ತೈವಾನ್ನಲ್ಲಿ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಎರಡನೇ ದಿನವೂ ವ್ಯಾಪಾರ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು. ಚಂಡಮಾರುತವು ಶುಕ್ರವಾರ ಆಗ್ನೇಯ ಚೀನಾಕ್ಕೆ ಬರುತ್ತಿದ್ದಂತೆ ತೀವ್ರ ಗಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ತೈವಾನ್ ಹವಾಮಾನ ಬ್ಯೂರೋದ ಮಾಹಿ...
ಜುಲೈ 29 ರಿಂದ ಆಗಸ್ಟ್ 2 ರವರೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಿಲಿಟರಿ ತರಬೇತಿ ನಡೆಸಲಿದ್ದು, ಪ್ಯಾರಾಸೆಲ್ ದ್ವೀಪಗಳು ಮತ್ತು ಮ್ಯಾಕ್ಲೆಸ್ಫೀಲ್ಡ್ ಬ್ಯಾಂಕ್ ಸೇರಿದಂತೆ ದೊಡ್ಡ ಪ್ರದೇಶವನ್ನು ಒಳಗೊಂಡಿದೆ ಎಂದು ಅದರ ಕಡಲ ಸುರಕ್ಷತಾ ಆಡಳಿತ ಶುಕ್ರವಾರ ತಿಳಿಸಿದೆ. ತರಬೇತಿಯ ಸಮಯದಲ್ಲಿ ಹಡಗುಗಳು ಈ ಪ್ರದೇಶವನ್ನು ಪ್ರವೇಶಿಸುವುದನ್ನ...
ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪ್ಯಾರಿಸ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮರಳಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಪ್ಯಾರಿಸ್ ಗೆಂದು ಶುಕ್ರವಾರ ಮಧ್ಯಾಹ್ನ ಏರ್ ಇಂಡಿಯಾ ವಿಮಾನ AI143 ನಿರ್ಗಮಿಸಿದ ಬಳಿಕ ರನ್ ವೇ ಯಲ್ಲಿ ಟೈರ್ ಅವಶೇಷಗಳು ಕಂಡುಬಂದಿವೆ. ಈ ಬಗ್ಗೆ ವಿಮಾನ ಸಿಬ್ಬಂದಿಗೆ ದೆಹಲಿ ಎಟಿಸಿಯ ಮಾಹಿತಿ ನೀಡಿದ್ದು...
ಡೋಕ್ಸುರಿ ಚಂಡಮಾರುತವು ಬುಧವಾರ ಉತ್ತರ ಫಿಲಿಪೈನ್ಸ್ ನ ಪ್ರಾಂತ್ಯಗಳಲ್ಲಿ ಭೀಕರ ಗಾಳಿ ಮತ್ತು ಮಳೆಯೊಂದಿಗೆ ದಡಕ್ಕೆ ಅಪ್ಪಳಿಸಿತ್ತು. ಪರಿಣಾಮ ಗ್ರಾಮೀಣ ಮನೆಗಳ ತಗಡಿನ ಛಾವಣಿಗಳು ಹಾರಿಹೋಗಿ ತಗ್ಗುಪ್ರದೇಶದ ಗ್ರಾಮಗಳಿಗೆ ಪ್ರವಾಹವನ್ನು ಉಂಟುಮಾಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರಿಂದ 12,000 ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂ...
ತೋಷ್ಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ತಡೆ ನೀಡುವಂತೆ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ಮನವಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿದೇಶಿ ...
ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಮೇಕಪ್ ಬ್ಯಾನ್..! ಹೌದು. ಅಚ್ಚರಿಯಾದರೂ ಸತ್ಯ. ಇಲ್ಲಿ ಮಹಿಳಾ ಬ್ಯೂಟಿ ಸೆಲೂನ್ಗಳಿಗೆ ಬೀಗ ಹಾಕಲಾಗಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯ ನಂತರ ಮಹಿಳೆಯರ ಸ್ವಾತಂತ್ರ್ಯವನ್ನು ತಡೆಯುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ತಾಲಿಬಾನ್ ಅಧಿಕಾರಿಗಳು ಮಹಿಳೆಯರಿಗೆ ಹಲವು ರೀತಿ ನಿರ್ಬಂಧಗಳನ...
ಲಿಂಗಪರಿವರ್ತನೆ ಮಾಡುವ ಯಾವುದೇ ವೈದ್ಯಕೀಯ ಚಟುವಟಿಕೆಗಳಿಗೆ ನಿಷೇಧ ಹೇರುವ ಹೊಸ ಕಾನೂನಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಹಿ ಹಾಕಿದ್ದಾರೆ. ಹೀಗಾಗಿ LGBTQ ಸಮುದಾಯಕ್ಕೆ ರಷ್ಯಾದಲ್ಲಿ ಮತ್ತೊಂದು ಹಿನ್ನಡೆ ಉಂಟಾಗಿದೆ. ಸಾಂಪ್ರದಾಯಿಕ ಕುಟುಂಬ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಲೇ ಬಂದಿರುವ ವ್ಲಾಡಿಮಿರ್ ಪುಟಿನ್ ಸಲಿಂಗಿಗಳಿ...
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಸೋಮವಾರ ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಎನ್ಎಸ್ಎಗಳ ಸಭೆಗಳಲ್ಲಿ ಭಾಗವಹಿಸಿದರು. ಅವರು ಅಲ್ಲಿ ಸೈಬರ್ ಭದ್ರತೆ ಮತ್ತು ಭಯೋತ್ಪಾದನೆಯೊಂದಿಗೆ ಅದರ ಸಂಪರ್ಕ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು. '...
ಚುನಾವಣಾ ಆಯೋಗವನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ವಿರುದ್ಧ ಮೇ 11 ರಂದು ಹೊರಡಿಸಲಾದ ಜಾಮೀನು ರಹಿತ ಬಂಧನ ವಾರಂಟನ್ನು ಅನುಸರಿಸುವ ಬಾಧ್ಯತೆಯನ್ನು ನಿರ್ವಹಿಸುವಂತೆ ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಸೋಮವಾರ ಇಸ್ಲಾಮಾಬಾದ್ ಕ್ಯಾ...
ಮೊನ್ನೆ ಗ್ರೇಟರ್ ನೊಯ್ಡಾಗೆ ಪಾಕಿಸ್ತಾನದ ಮಹಿಳೆ ಸೀಮಾ ತನ್ನ ಪ್ರಿಯಕರನನ್ನು ನೋಡಲು ಬಂದು ಸುದ್ದಿಯಾಗಿದ್ದಳು. ಇದೀಗ ಭಾರತದ ವಿವಾಹಿತ ಮಹಿಳೆಯೊಬ್ಬರು ತಾನು ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿದ ಮತ್ತು ಪ್ರೀತಿಸುತ್ತಿದ್ದ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ತೆರಳಿದ್ದಾರೆ. ಹೌದು. ಉತ...