ಕೂದಲು ಉದುರುವಿಕೆ ಈಗಿನ ಕಾಲದಲ್ಲಂತೂ ಅತೀ ಹೆಚ್ಚು ಜನರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೂದಲು ಉದುರುತ್ತಿದೆ ಎಂದು ಕೈಗೆ ಸಿಕ್ಕಿದ ಶ್ಯಾಂಪುಗಳನ್ನು ತಲೆಗೆ ಹಚ್ಚಿ ಇರುವ ಸ್ವಲ್ಪ ಕೂದಲುಗಳನ್ನು ಕಳೆದು ಕೊಂಡವರ ಪಾಡು ಹೇಳತೀರದು. ಕೂದಲು ಉದುರುವ ಸಮಸ್ಯೆಗೆ ಕೆಲವೇ ನಿಮಿಷಗಳಲ್ಲಿ ಪರಿಹಾರ ಸಿಗಬೇಕು ಅಂದುಕೊಳ್ಳಬೇಡಿ...
ನಮ್ಮ ಆರೋಗ್ಯ ಯಾವುದೋ ಪ್ರೈವೇಟ್ ಆಸ್ಪತ್ರೆಗಳಲ್ಲಿದೆ ಎನ್ನುವ ಮೂಢನಂಬಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಬಂದ ಬಳಿಕವಂತೂ, ರೋಗಗಳ ವಿರುದ್ಧ ಸ್ಟಿರಾಯ್ಡ್ ಗಳನ್ನು ಬಳಸುತ್ತಿರುವ ಸಂಖ್ಯೆ ಕೂಡ ಹೆಚ್ಚಾಗಿದೆ ಎನ್ನುವ ಆತಂಕಗಳ ನಡುವೆಯೇ, ಜನರಲ್ಲಿ ಆರೋಗ್ಯದ ಬಗೆಗೆ ಕಾಳಜಿ ಹೆಚ್ಚಾಗಿರುವುದೇನು ಸುಳ್ಳಲ...
ಬಹುತೇಕ ಜನರಿಗೆ ತಮ್ಮ ತೂಕ ಇಳಿಸುವುದು ಒಂದು ಸಾಹಸಮಯವಾದ ಕೆಲಸವಾಗಿರುತ್ತದೆ. ಜಿಮ್ ಗೆ ಹೋದರೂ, ನಾನಾ ಯೋಗಾಸನಗಳನ್ನು ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ಬಹಳಷ್ಟು ಜನರು ಬೇಸರದಿಂದ ಮಾತನಾಡುವುದಿದೆ. ಆದರೆ ದೇಹದ ತೂಕ ಇಳಿಕೆಗೆ ನಮ್ಮ ಆಹಾರದಲ್ಲಿ ಬದಲಾವಣೆ ಕೂಡ ಇರಬೇಕು ಎನ್ನುವುದಕ್ಕೆ ಯಾರೂ ಹೆಚ್ಚಿನ ಒತ್ತು ನೀಡುವುದೇ ಇಲ್ಲ. ಕೊ...
ಮುಖದ ಮತ್ತು ಚರ್ಮದ ಆರೋಗ್ಯಕ್ಕಾಗಿ ಬಹಳಷ್ಟು ಜನರು ರಾಸಾಯನಿಕಗಳ ಮೊರೆ ಹೋಗುತ್ತಾರೆ. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಜನರು ತುತ್ತಾಗುವುದೂ ಇದೆ. ಆದರೆ, ಕಬ್ಬಿನಾಂಶ ಮತ್ತು ವಿಟಮಿನ್ ಗಳ ಉಗ್ರಾಣ ಎಂದೇ ಕರೆಯಲ್ಪಡುವ ಬಿಟ್ರೋಟ್ ಬಳಕೆಯಿಂದ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮೈ ಬಣ್ಣವನ್ನು ಹೆಚ್ಚಿಸಲು ಬಿಟ...
ಮನುಷ್ಯ ತನ್ನ ಆಹಾರದ ಮೂಲಕವೇ ತನ್ನ ರೋಗಗಳನ್ನು ನಿಯಂತ್ರಿಸಲು ಸಾಧ್ಯ. ಪ್ರತಿಯೊಂದು ಕಾಯಿಲೆಗೂ ಕೇವಲ ಮದ್ದು, ಮಾತ್ರೆಗಳನ್ನು ಸೇವಿಸುವುದೇ ಪರಿಹಾರವಲ್ಲ. ಹಾಗೆಂದರೆ ಮದ್ದು ಮಾತ್ರೆಗಳನ್ನು ಸೇವಿಸ ಬಾರದು ಎಂದರ್ಥವಲ್ಲ. ನಮ್ಮ ಆಹಾರವನ್ನು ನಿಯಂತ್ರಿಸುವ ಮೂಲಕ ರೋಗಬಾರದ ಹಾಗೆ ಮತ್ತು ಬಂದಿರುವ ರೋಗವನ್ನು ನಿಯಂತ್ರಿಸುವ ಬಗ್ಗೆ ಜನರು ಯೋಚಿಸಬೇ...
ಮಹಿಳೆಯರಾಗಲಿ, ಪುರುಷರಾಗಲಿ ಚರ್ಮದ ಆರೈಕೆಯ ವಿಚಾರ ಬಂದರೆ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಬೇರೆ ಬೇರೆ ಕಂಪೆನಿಗಳು ತಯಾರಿಸುವ ಸೌಂದರ್ಯ ವರ್ಧಕಕ್ಕೆ ಜನರು ಮುಗಿಬೀಳುತ್ತಾರೆ. ಆದರೆ ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸುವ ಸೌಂದರ್ಯ ವರ್ಧಕಗಳು ಸುರಕ್ಷಿತವಲ್ಲ. ನಮ್ಮ ಸುತ್ತಮುತ್ತಲಿರುವ ವಸ್ತುಗಳಲ್ಲಿಯೇ ಹಲವಾರು ಮದ್ದುಗಳಿರ...
ಕಾಫಿ ಪ್ರಿಯರಿಗೆ ಸಿಹಿ ಸುದ್ದಿಯೊಂದು ದೊರೆತಿದೆ. ಇತ್ತೀಚಿಗಿನ ಅಧ್ಯಯನದ ಪ್ರಕಾರ ಪ್ರತೀ ದಿನ ಕಾಫಿ ಕುಡಿಯುವುದರಿಂದ ಜನರು ಯಕೃತ್ತಿ(ಲಿವರ್)ನ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಹೇಳಲಾಗಿದೆ. ಸೌತೌಂಪ್ಟನ್ ವಿಶ್ವವಿದ್ಯಾಲಯದ ಡಾ.ಆಲಿವರ್ ಕೆನಡಿ ಅವರ ನೇತೃತ್ವದ ತಂಡ ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ತಿಳಿದು ಬಂದಿದ...
ಒಬ್ಬ ವ್ಯಕ್ತಿ ಮದ್ಯಪಾನದ ಚಟಕ್ಕೆ ಬಿದ್ದರೂ ವಾಪಸ್ ಬರಬಹುದು, ಆದರೆ, ಸಿಗರೇಟ್ ಚಟಕ್ಕೆ ಬಿದ್ದವನ ಕಥೆ ಸಿಗರೇಟ್ ನಲ್ಲಿಯೇ ಅಂತ್ಯವಾಗುವುದು ಎಂದು ಸಿಗರೇಟ್ ಸೇದುವ ಬಹಳಷ್ಟು ಜನರ ಅಭಿಪ್ರಾಯಗಳಾಗಿವೆ. ಸಿಗರೇಟ್ ಬಿಟ್ಟು ಬಿಡಬೇಕು ಎಂದು ಎಷ್ಟು ಪ್ರಯತ್ನಿಸಿದರೂ ಸಿಗರೇಟ್ ಬಿಟ್ಟು ಬಿಡಲು ಸಾಧ್ಯವಾಗದೇ ಅಸಹಾಯಕರಾಗಿ ನಿಂತಿರುವ ಬಹಳಷ್ಟು ಧೂಮಪಾ...
ವಯಸ್ಸಾಗುತ್ತಿದ್ದಂತೆಯೇ ಆರೋಗ್ಯವಂತ ದೇಹ ಇದ್ದರು ಕೂಡ ಬಹುತೇಕರು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಮನುಷ್ಯನಿಗೆ 40 ದಾಟಿದ ಬಳಿಕ ಅವರಲ್ಲಿ ನೆನಪಿನ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಈ ಆಧಾರದಲ್ಲಿ ನಡೆಸಲಾದ ಅಧ್ಯಯನವೊಂದು ಇದೀಗ 40 ವರ್ಷದಿಂದ ಮೇಲ್ಪಟ್ಟ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ. ಸಿಂಗಾಪುರದ ರಾಷ್ಟ್...
ಬೇಸಿಗೆ ಕಾಲ ಆರಂಭವಾದರೆ ಸಾಕು ನೊಣ, ಜಿರಳೆಗಳ ಸಮಸ್ಯೆಗಳನ್ನೇ ಜನರು ಹೇಳುತ್ತಾರೆ. ಇದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕ ವಸ್ತುಗಳಿಂದ ತಯಾರಿಸಿರುವ ಸ್ಪ್ರೇಗಳನ್ನು ಸಾಮಾನ್ಯವಾಗಿ ಜನರು ಬಳಸುತ್ತಾರೆ. ಆದರೆ ಇದು ಮನುಷ್ಯನ ಆರೋಗ್ಯದ ಮೇಲೆಯೂ ಗಂಭೀರವಾದ ಪರಿಣಾಮಗಳನ್ನು ನಿಧಾನವಾಗಿ ತೋರಿಸಲು ಪ್ರಾರಂಭಿಸುತ್ತದೆ ಎಂದು ಆರೋಗ್ಯ ತಜ್ಞ...