ಉಡುಪಿ: ಚಿನ್ನಾಭರಣಗಳ ಮಳಿಗೆ ಆಭರಣ ಜ್ಯುವೆಲ್ಲರ್ ಇದರ ಉಡುಪಿ, ಮಂಗಳೂರು ಸೇರಿದಂತೆ ವಿವಿಧ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಗಿನ ಜಾವ ದಾಳಿ ನಡೆಸಿದ್ದಾರೆ. ಉಡುಪಿ ನಗರದಲ್ಲಿರುವ ಪ್ರಮುಖ ಮಳಿಗೆ, ಅಲ್ಲೇ ಸಮೀಪ ಇರುವ ಆಭರಣ ತಯಾರಿಕಾ ಘಟಕ, ಬ್ರಹ್ಮಾವರ, ಮಂಗಳೂರು ಸೇರಿದಂತೆ ವಿವಿಧ ಮಳಿಗೆಗಳಿಗೆ ಏಕಕಾಲದಲ್ಲಿ ತಂಡ ದಾಳಿ ನಡೆಸಿರು...
ಕಾರ್ಕಳ: ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು (54) ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಲೂಕಿನ ಅಜೆಕಾರು ಗ್ರಾಮದ ನಿವಾಸಿಯಾಗಿರುವ ಶೇಖರ್ ಅಜೆಕಾರ್ ಇವರು, ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೂಡಿಗೆರೆ : ಕೆ ಎಸ್ ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಬರುತ್ತಿದ್ದ ಮಹಿಳೆ ಯಶೋಧಮ್ಮ ಎಂಬುವರು ಬಸ್ಸಿಗೆ ಹತ್ತುವಾಗ ಕುತ್ತಿಗೆಯಲ್ಲಿ ಹಾಕಿದ್ದ 37 ಗ್ರಾಮ್ ಮಾಂಗಲ್ಯ ಸರ ಕಿತ್ತ ಖದೀಮರು ಪರಾರಿಯಾದ ಘಟನೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನಡೆದಿದೆ. 1 ಲಕ್ಷಕ್ಕಿಂತಾ ಹೆಚ್ಚು ಬೆಲೆ ಬಾಳುವ ಮಾಂಗಲ್ಯ ಸರ ...
ಮುಡಿಪು: ಹಣ್ಣುಹಂಪಲು ಹೊತ್ತ ಟೆಂಪೊ ಬ್ರೇಕ್ ವೈಫಲ್ಯದಿಂದಾಗಿ ಪಲ್ಟಿಯಾದ ಘಟನೆ ಮುಡಿಪು ಮಿತ್ತಕೋಡಿಯಲ್ಲಿ ನಡೆದಿದೆ. ಟೆಂಪೊದಲ್ಲಿ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಮೆಲ್ಕಾರ್ ಕಡೆಗೆ ಹಣ್ಣುಹಂಪಲು ಸಾಗಿಸಲಾಗುತ್ತಿತ್ತು. ಬ್ರೇಕ್ ವೈಫಲ್ಯಕ್ಕೀಡಾದ ವಾಹನ ಚಾಲಕನ ನಿಯಂತ್ರಣ ತಪ್ಪಿ ಐದು ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ. ಟೆಂಪೊ...
ಚಿಕ್ಕಮಗಳೂರು: ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಪ್ರಸನ್ನ ಕುಮಾರ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಮಂಗಳೂರಿನ ಸಮೀಪದಲ್ಲಿ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹ...
ಬಜಪೆ: ಪ್ರಾಥಮಿಕ ಆರೋಗ್ಯ ಕೇಂದ್ರ ಬೋಂದೆಲ್, ಹಳೆ ವಿದ್ಯಾರ್ಥಿ ಸಂಘ (ರಿ.) ಕರಂಬಾರು, ಶ್ರೀನಿವಾಸ್ ಮೆಡಿಕಲ್ ಕಾಲೇಜು,ರೋಟರಿ ಕ್ಲಬ್ ಡೌನ್ ಟೌನ್ ಇವರ ಸಹಯೋಗ ದೊಂದಿಗೆ ಬೃಹತ್ ರಕ್ತದಾನ ಶಿಬಿರ ಕರಂಬಾರು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ ವಹಿಸಿದ್ದರು...
ಮಂಗಳೂರಿನ ನೇತ್ರಾವತಿ ನದಿಯ ಸೇತುವೆ ಬಳಿ ಯುವಕನೊಬ್ಬ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪ್ರಸನ್ನ (37) ಆತ್ಮಹತ್ಯೆ ಮಾಡಿಕೊಂಡವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮ...
ಉಜಿರೆ: ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದ ಕೊಡೆಕಲ್ಲು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಜಗದೀಶ್(30) ಎಂದು ಗುರುತಿಸಲಾಗಿದೆ. ಈತನ ತಂದೆ ಕೃಷ್ಣಯ್ಯ ಆಚಾರ್ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ ರಾತ್ರಿಯ ವೇಳೆ ತಂದೆ ಹಾಗೂ ಮಗನ ನಡುವೆ ಮಾತಿನ ಜಗಳ ನಡೆ...
ತುಮಕೂರು: ಮನೆಯೊಂದರಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡ ಚೋರರು ಹಾಡಹಗಲೇ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ವಿದ್ಯಾನಗರದಲ್ಲಿ ಘಟನೆ ನಡೆದಿದೆ ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ದೋಚುವಾಗಲೇ ಖತರ್ನಾಕ್ ಖದೀಮರು ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾರೆ....
ಕೋಟ: ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಆವರ್ಸೆ ಸಮೀಪ ಕಿರಾಡಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ. ಸ್ಥಳೀಯ ಕಿರಾಡಿ ಹಂಚಿನಮನೆ ನಿವಾಸಿ, ಬಾಬಣ್ಣ ಶೆಟ್ಟಿ ಹಾಗೂ ಬೇಬಿ ಶೆಡ್ತಿಯವರ ಪುತ್ರ ಪ್ರಮೋದ್ ಶೆಟ್ಟಿ ( 24) ಮೃತ ಯುವಕ. ಮನೆಯ ಹೊರೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿ...