ಮಂಗಳೂರು: ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ಪೇರಡ್ಕದಲ್ಲಿ ಇಮ್ಯಾನ್ಯುಯೆಲ್ ಚರ್ಚಿನ ಮೇಲೆ ಇತ್ತೀಚೆಗೆ ಅಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಜರಂಗದಳದ ಕಿಡಿಗೇಡಿಗಳು ದಾಳಿ ನಡೆಸಿ, ಅಲ್ಲಿನ ಹೋಲಿ ಕ್ರಾಸನ್ನು ಧ್ವಂಸ ಮಾಡಿ, ಅಲ್ಲಿ ಕೇಸರಿಧ್ವಜವನ್ನ ಕಟ್ಟಿದ್ದಾರೆ. ಇದರ ವಿರುದ್ಧ ಜಿಲ್ಲಾದ್ಯಂತ ಸುದ್ದಿಯಾಗಿ ಸಾರ್ವಜನಿಕವಾಗಿ, ಖಂಡನೆ ಹಾಗೂ ಆ...
ಕಣಿಯೂರು: ಬಾಲಕಿಯ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆಯ ದೂರಿನನ್ವಯ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಶಾಹುಲ್ ಹಮೀದ್ ಅಲಿಯಾಸ್ ಕುಟ್ಟ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರಿನ...
ಕಿನ್ಯಾ: ದಲಿತರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಅವರ ಬದುಕನ್ನು ತೀರಾ ನಿರ್ಲಕ್ಷಿಸಿದ ಮಂಗಳೂರು ತಾಲೂಕಿನ ಕಿನ್ಯಾ ಗ್ರಾಮ ಪಂಚಾಯತ್ ನ ದಲಿತ ವಿರೋಧಿ ಧೋರಣೆಯ ವಿರುದ್ಧ ದಲಿತ ಹಕ್ಕುಗಳ ಸಮಿತಿಯ ನೇತ್ರತ್ವದಲ್ಲಿ ಕಿನ್ಯಾ ಗ್ರಾಮ ಪಂಚಾಯತ್ ನ ಎದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಪ್ರತಿಭಟನೆಯನ್ನುಉದ್ಘಾಟಿಸಿ ಮಾತನ...
ಬಾಗಲಕೋಟೆ: ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ 6.40 ಲಕ್ಷ ರೂಪಾಯಿ ಗೆದ್ದಿದ್ದ ಲೈನ್ ಮೆನ್ ತಿಮ್ಮಣ್ಣ ಭೀಮಪ್ಪ ಗುರಡಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಮೂಡಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲ...
ವಿಟ್ಲ: 10ನೇ ತರಗತಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದೆ. ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ 14 ವರ್ಷ ವಯಸ್ಸಿನ ಆತ್ಮಿಕಾ ಆತ್ಮಹತ್ಯೆಗೆ ಶರಣಾದ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿಯ ಕುಟುಂಬ ಕನ್ಯಾನ ಗ್ರಾಮದ ಕಣಿಯೂರಿನ ...
ಪುತ್ತೂರು: ಟಿಪ್ಪರ್ ಲಾರಿ ಹಾಗೂ ಆಕ್ಟೀವಾ ನಡುವೆ ನಡೆದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು ಹೆದ್ದಾರಿಯ ಉರ್ಲಾಂಡಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಶೇಖಮಲೆ ನಿವಾಸಿ 18 ವರ್ಷ ವಯಸ್ಸಿನ ಯುವಕ ಸಿನಾನ್ ಎಂಬವರು ಅಪಘಾತದಲ್ಲಿ ಸಾವಿಗೀಡಾದ ಯುವಕ ...
ದಾವಣಗೆರೆ: ಭೀಕರ ಅಪಘಾತವೊಂದರಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕುಂದುವಾಡ ಕ್ರಾಸ್ ಬಳಿ ನಡೆದಿದೆ. ಮೃತರು ಶಿವಮೊಗ್ಗ ಮೂಲದವರಾಗಿದ್ದು, ಜಬೀವುಲ್ಲಾ (45), ಅವರ ಪತ್ನಿ ಹಮೀದಾ (43), ಮೊಮ್ಮಗಳು ಗೌಸಿಯಾ ಬಾನು (4) ಎಂದು ಗುರುತಿಸಲಾಗಿದೆ...
ಮಂಗಳೂರು: ತೊಕ್ಕೊಟ್ಟು ಮಸೀದಿಯಲ್ಲಿ ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತ...
ದಕ್ಷಿಣ ಕನ್ನಡ(ಮಂಗಳೂರು): ರೌಡಿಶೀಟರ್ ವೋರ್ವನನ್ನು ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಮಂಗಳೂರಿನ ಎಮ್ಮೆಕೆರೆಯಲ್ಲಿ ನಡೆದಿದೆ. ನಗರದ ಹೊಯ್ಗೆ ಬಜಾರ್ ನಿವಾಸಿ 25 ವರ್ಷ ವಯಸ್ಸಿನ ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್ ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ. ಈತನ ವಿರುದ್ಧವೂ ರೌಡಿಶೀಟರ್ ಸೇರಿದಂತ...
ಧಾರವಾಡ: ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿಯಾದ ದಾರುಣ ಘಟನೆ ಧಾರವಾಡದ ನವಲೂರಿನ ರೈಲ್ವೆ ಗೇಟ್ ಬಳಿ ನಡೆದಿದೆ.ಮೃತ ಬಾಲಕನ್ನು ದುಮ್ಮವಾಡ ಗ್ರಾಮದ ಪ್ರಥಮ ನೀರಲಕಟ್ಟಿ (11) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದ ಕಾರಣ ರಜೆ ಕಳೆಯಲೆಂದು ನವಲೂರಿನ ಅಜ್ಜಿ ಮನೆಗೆ ಬಂದಿದ್ದ ಬಾಲಕ ಅಜ್ಜನಿಗೆ ಮಧ್ಯಾಹ್ನದ ಊಟ ಕೊಡಲೆಂದು ತೋಟಕ್...