ರಾಯಚೂರು: ಅನಾರೋಗ್ಯ ಇದೆ ಮದ್ದಿಗೆ ಹೋಗಬೇಕು. ಹಾಗೆಯೇ ಬರುವ ದಾರಿಯಲ್ಲಿ ಮಗನನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೊರಟ ತಂದೆ, ಪತ್ತೆಯಾಗಿದ್ದು ಶವವಾಗಿ. ಅದೂ ತನ್ನ ಪುತ್ರನಿಂದಲೇ ತಂದೆ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ನಗರದ ಗೋಶಾಲಾ ರಸ್ತೆ ಬಳಿಯಲ್ಲಿ ಈ ಭೀಕರ ಹತ್ಯೆ ನಡೆದಿದ್ದು, 75 ವರ್ಷ ವಯಸ್ಸಿನ ನಿವೃತ್ತ ಎಎಸ್ ಐ ಬಸವರಾಜ...
ಬೆಂಗಳೂರು: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆದೇಶ ತಂದಿದ್ದು, ಇದರ ಪ್ರಕಾರ ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ ಅನ್ವಯ ಎಂದಿದೆ. ಈ ನಿಟ್ಟಿನಲ್ಲಿ ಒಬಿಸಿಗಳಿಗೆ ಮೀಸಲಾತಿ ಕೊಡುವಂತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರ...
ಬೆಂಗಳೂರು: ಮರದ ಕೊಂಬೆ ತಲೆ ಮೇಲೆ ಬಿದ್ದ ಪರಿಣಾಮ ಪ್ರಜ್ಞೆ ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ. ಎರಡನೇ ತರಗತಿ ಓದುತ್ತಿದ್ದ ರೈಚಲ್ ಪ್ರಿಷಾ(8) ಮೃತ ಬಾಲಕಿ. ಈಕೆ ಪರೀಕ್ಷಾ ಪ್ರವೇಶ ಪತ್ರ ತರಲೆಂದು 2020ರ ಮಾ...
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕಣಗಲು ಗ್ರಾಮದಲ್ಲಿ ಸಾಲಭಾದೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಯಣ್ಣೇ ಗೌಡ (45) ಮೃತ ರೈತ. 4.39 ಎಕರೆ ಜಮೀನು ಹೊಂದಿದ್ದ ಜಯಣ್ಣೇ ಗೌಡ, ಜಮೀನಿನಲ್ಲಿ ತಂಬಾಕು, ಮುಸುಕಿನ ಜೋಳ, ರಾಗಿ ಬೆಳೆದಿದ್ದರು. ಈ ಬೆಳೆ ಬೆಳೆಯಲು ಬ್ಯಾಂಕ್ನಲ್ಲಿ 5 ಲಕ್ಷ ರೂ., ...
ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೊಬ್ಬರ ಕಾರಿಗೆ ಕಳ್ಳ ಕನ್ನ ಹಾಕಿರುವ ಘಟನೆ ನಡೆದಿದ್ದು, ಕಾರಿನ ಗಾಜು ಒಡೆದು ಹಣ ಹಾಗೂ ಲ್ಯಾಪ್ ಟಾಪ್ ನೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ನಿಲ್ಲಿಸಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರುಣ್ ಸಾಳುಂಕೆ ಅವರ ಕಾರಿನ ಗಾಜ...
ಬೆಂಗಳೂರು: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದ್ದು, ಅಂತಿಮ ತೀರ್ಪು ಬರುವವರೆಗೂ ಯಾವುದೇ ರೀತಿಯ ಧಾರ್ಮಿಕ ಗುರುತುಗಳನ್ನು ಬಳಸಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಪ್ರವೇಶಿಸದಂತೆ ಆದೇಶಿಸಿದೆ. ಇದೆ ವೇಳೆ ಅರ್ಜಿದಾರರ ವಾದವನ್ನೂ ಕೂಡ ಪರಿಶೀಲಿಸಲಾಗುವುದು, ನ್ಯಾಯಾಲಯದ ಮೇಲೆ...
ನೆಲಮಂಗಲ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ಮತ್ತು ಮಾವ ಇಬ್ಬರು ಸೇರಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರಿನ ದಿಬ್ಬೂರು ಮೂಲದ ರೇಖಾ (30) ಮೃತ ಮಹಿಳೆ. ಈಕೆಯನ್ನು 2 ವರ್ಷದ ಹಿಂದೆ ದಾಬಸ್ ಪೇಟೆಯ ಗಿರೀಶ್ ಜೊತೆ ಮದುವೆ ಮಾಡಲಾಗಿತ್ತು. ಮದುವೆ...
ಚಾಮರಾಜನಗರ: ತಾಲೂಕಿನ ಬಾಣಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕೊಳ್ಳೇಗಾಲ ಮಾಜಿ ಶಾಸಕ ಎಸ್.ಬಾಲರಾಜು ಸೇರಿ ಮೂವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಬುಧವಾರ ರಾತ್ರಿ ಮಾಜಿ ಶಾಸಕ ಎಸ್.ಬಾಲರಾಜು ಅವರು ಕಾರಿನಲ್ಲಿ ಯಳಂದೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಬಾಣಳ್ಳಿ ಗೇಟ್ ಬಳಿ ಕಾರು ಮತ್ತು ಅಶೋಕ ಲೈಲ್ಯಾಂಡ್ ಗಾಡ...
ಹಾಸನ: ಸಚಿವ ಸಂಪುಟ ವಿಸ್ತರಣೆ ಸದ್ದು ಕೇಳಿಸುತ್ತಿದ್ದಂತೆಯೇ, ಶಾಸಕ ಪ್ರೀತಂ ಗೌಡ ಅವರ ಹೆಸರು ಕೇಳಿ ಬಂದಿದ್ದು, ಹಾಸನದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳ ಮೂಲಕ ಗಮನ ಸೆಳೆಯುತ್ತಿರುವ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ದೊರಕ ಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಪ್ರೀತಂ ಗೌಡ ಅವರು ಜನಸಾಮಾನ್ಯರ ಕೈಗೆಟಕುವ ಶಾಸಕರಾಗಿದ್ದಾರೆ. ಜನರ ಯಾವ...
ಕಲಬುರಗಿ: ಮಕ್ಕಳ ಮನಸಲ್ಲಿ ಈಗಿನಿಂದಲೇ ಕೋಮುವಾದ ಸೃಷ್ಟಿಸಲು ಕೆಲವರು ಮುಂದಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯ ಡ್ರೆಸ್ಕೋಡ್ ನ್ನು ತಾವೇ ನಿರ್ಧಾರ ಮಾಡುವಂತೆ ಸರ್ಕಾರ ಹೇಳಿದೆ. ಹಾಗಾದರೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಬುರ್ಖಾ ಕಡ್ಡಾಯ ಮಾಡುತ್ತಾರೆ. ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡೋ ಹಿಂದೂ ವಿದ್ಯಾ...