ಧ್ವಂಸದ ಭೀತಿಯನ್ನು ಎದುರಿಸುತ್ತಿರುವ ದೆಹಲಿಯ ನಿಜಾಮುದ್ದೀನ್ ಬಳಿಯ ಪೈಜಾಬ್ ಮಸೀದಿ ಮತ್ತು ಮದರಸಕ್ಕೆ ಪರ್ಯಾಯ ಜಾಗವನ್ನು ಮಂಜೂರು ಮಾಡಿ ಎಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. 40 ವರ್ಷಗಳ ಈ ಮಸೀದಿಗೆ ಪರ್ಯಾಯ ಜಾಗವನ್ನು ಮುಂದಿನ ನಾಲ್ಕು ವಾರಗಳ ಒಳಗೆ ಮಂಜೂರು ಮಾಡಬೇಕು ಎಂದು ಆದೇಶಿಸಿದೆ. ಬಳಿಕ ...
ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್ನಲ್ಲಿ ಕೆಲ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಇಂಡಿಯಾ ಬಣದ ನಾಯಕರು ಪ್ರತಿಭಟನಾರ್ಥವಾಗಿ ಸಭಾ ತ್ಯಾಗ ನಡೆಸಿದರು. ಕಾಂಗ್ರೆಸ್ ಮಂಡಿಸಿರುವ ಬಜೆಟ್ಗಳಲ್ಲೂ ಎಲ್ಲ ರಾಜ್ಯಗಳ ಹೆಸರು ಉಲ್ಲೇಖಿಸಿದ್ದಾರೆಯೇ? ತೋರಿಸಲಿ ಎಂದು ಹಣಕಾಸು ಸಚಿವೆ ಕಾಂಗ್ರೆಸ್ ಗೆ ಸವಾಲು ಹಾಕಿದರು. ...
ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ಲಾರಿ ಸಹಿತವಾಗಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಟ್ರಕ್ ನದಿಯ ಆಳದಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ನೀಡಿದ್ದಾರೆ. ನದಿಯ ಕೆಳಭಾಗದಲ್ಲಿ...
ಉತ್ತರ ಪ್ರದೇಶದ ಬರೇಲಿಯಲ್ಲಿ ಮೊಹರ್ರಂ ಮೆರವಣಿಗೆಯಲ್ಲಿ ಘರ್ಷಣೆ ನಡೆದ ಆರೋಪದ ಮೇಲೆ ಕನಿಷ್ಠ ಒಂಬತ್ತು ಜನರ ಮನೆಗಳನ್ನು ನೆಲಸಮ ಮಾಡಲಾಗಿದೆ. ಉತ್ತರ ಪ್ರದೇಶದ ಬರೇಲಿಯ ಜಿಲ್ಲಾಡಳಿತವು ಮೊಹರ್ರಂ ಮೆರವಣಿಗೆಯಲ್ಲಿ ಘರ್ಷಣೆಯಲ್ಲಿ ಭಾಗಿಯಾದ ಜನರ ಕನಿಷ್ಠ ಒಂಬತ್ತು ಮನೆಗಳನ್ನು ನೆಲಸಮಗೊಳಿಸಿದೆ. ಜುಲೈ 19ರಂದು ಬರೇಲಿಯಲ್ಲಿ ಒಂದು ಸಮುದಾಯದ ಸ...
ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಕೋಟ್ಯಂತರ ಹಣವನ್ನು ಹಂಚಿಕೆ ಮಾಡುವಾಗ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ದೀರ್ಘಕಾಲದ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಕೋಟ್ಯಂತರ ಹಣವನ್ನು ಹಂಚಿಕೆ ಮಾಡುವಾಗ ವಿಶೇಷ ವರ್ಗದ ಸ...
ನಕಲಿ ಅಂಗವೈಕಲ್ಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಆರೋಪದ ಮೇಲೆ ವಿವಾದಾತ್ಮಕ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ನಿಗದಿತ ಗಡುವಿನೊಳಗೆ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್ಬಿಎಸ್ಎನ್ಎಎ) ಗೆ ವರದಿ ನೀಡಲು ವಿಫಲರಾಗಿದ್ದಾರೆ. ಆಕೆಯ ಆಯ್ಕೆಯ ಸುತ್ತ ...
ನೇಪಾಳ ವಿರುದ್ಧ 82 ರನ್ಗಳ ಭರ್ಜರಿ ಜಯ ಗಳಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡವು ಏಷ್ಯಾಕಪ್ ಸೆಮಿಫೈನಲ್ ಪ್ರವೇಶಿಸಿದೆ. ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಪ್ರಮುಖ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಾಕರ್ ಅವರ ಅನುಪಸ್ಥಿತಿಯಲ್ಲಿಯೂ ಭರ್ಜರಿ ಪ್ರದರ್ಶನ ನೀಡಿತು. ಟಾಸ್ ಗೆ...
ಉದ್ಯೋಗ ಸಂಬಂಧಿತ ಮೂರು ಯೋಜನೆಗಳನ್ನು ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. 2024-25ರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಒಂದು ತಿಂಗಳ ಪಿಎಫ್ (ಭವಿಷ್ಯ ನಿಧಿ) ಕೊಡುಗೆಯನ್ನು ನೀಡುವ ಮೂಲಕ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದ...
ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್ನ ಸೂರತ್ ಮೂಲಕ ವ್ಯಕ್ತಿಯೊಬ್ಬನನ್ನು ಸೂರತ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ ಸೇರಿದಂತೆ ಬಿಜೆಪಿಯ ಹಲವಾರು ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ ಡ್ರಗ್ ಪ್ಲೆಡರ್, ಆ...
ಮಂಗಳವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಜಾಮೀನು ಆದೇಶಗಳನ್ನು ಸಾಮಾನ್ಯವಾಗಿ ತಡೆಯಬಾರದು ಎಂದು ಎತ್ತಿ ಹಿಡಿದಿದೆ. ಆರೋಪಿಯು ಭಯೋತ್ಪಾದಕನಾಗಿದ್ದರೆ, ದೇಶವಿರೋಧಿಯಾಗಿದ್ದರೆ, ಜಾಮೀನು ಆದೇಶವು ದೋಷಪೂರ್ಣವಾಗಿದ್ದರೆ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಜಾಮೀನನ್ನು ತಡೆಹಿಡಿಯಬಹುದು ಎಂದು ಒತ್ತಿ ಹೇಳಿದೆ. ಅಕ...