ಮಂಗಳೂರಿನ ನವ ಮಂಗಳೂರು ಬಂದರಿಗೆ ‘ಸೆವೆನ್ ಸೀಸ್ ಎಕ್ಸ್ಪ್ಲೋರರ್’ ಹಡಗು ಆಗಮಿಸಿತು. ಇದು ಈ ಋತುವಿನ ಎರಡನೇ ಕ್ರೂಸ್ ಹಡಗು ಆಗಿದೆ. ಈ ಹಡಗಿನಲ್ಲಿ 686 ಪ್ರಯಾಣಿಕರು ಮತ್ತು 552 ಸಿಬ್ಬಂದಿ ವರ್ಗದ ಸದಸ್ಯರಿದ್ದರು. ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಎನ್ಎಂಪಿಎ ಮತ್ತು ಎಂಪಿಎ ಅಧ್ಯಕ್ಷ ಡಾ. ಎ.ವಿ. ರಮಣ ಸ್ವಾಗತ ಕೋರಿದರು. ಈ ತಂಡದ ...
ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಮನೆಯಲ್ಲಿ ಇದ್ದ ಸಂದರ್ಭ ಅವರ ಕುತ್ತಿಗೆಯಿಂದ ಚಿನ್ನದ ಸರ ದರೋಡೆ ಪ್ರಕರಣ ನಡೆದಿತ್ತು. ಈ ಕೇಸ್ ಆರೋಪಿತ ಸಲೀಂ ಪಿ.ಎ. (34) ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 28ರಂದು ಬೆಳಿಗ್ಗೆ 10:30ಕ್ಕ...
ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ದುಷ್ಕರ್ಮಿಗಳ ಗುಂಪೊಂದು ವಿಕೃತಿ ಮೆರೆದಿದೆ. ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಬುಧವಾರದಂದು ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಅನೇಕ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಆದರೆ ಏಕ ಏಕಿ ...
ಉಡುಪಿ: ನನ್ನ ಅಭಿಮಾನಿಗಳು ಮತ್ತೇ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಉಡುಪಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಪಕ್ಷ ಬಯಸಿದರೇ ರಾಜ್ಯ ಹಿಂ.ವ.ಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ವಿಧಾನಸಭಾ ...
ಉಡುಪಿ ನಗರಸಭೆಯ ವ್ಯಾಪ್ತಿಯ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ವೃತ್ತಕ್ಕೆ ಮೊಗವೀರ ಸಮಾಜದ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಮತ್ತು ಮಲ್ಪೆ ಬಸ್ ನಿಲ್ದಾಣದ ವೃತ್ತಕ್ಕೆ ಮೊಗವೀರ ಸಮಾಜದ ಮುಖಂಡರಾಗಿದ್ದ ದಿ.ಮಲ್ಪೆ ಮಧ್ವರಾಜರ ಹೆಸರಿಡಲು ನಗರಸಭೆ ಪೌರಾಯುಕ್ತ ಡಾ.ಉದಯ್ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷೆ ಸುಮಿತ್ರಾ ನಾಯಕ್ ಇವರ...
ಅಕ್ರಮ ಟೋಲ್ ಸುಲಿಗೆಯನ್ನು ತಡೆಯಲು ವಿಫಲರಾದ ಬಿಜೆಪಿ ಸಂಸದ, ಶಾಸಕರ ಜನವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಸುಲಿಗೆ ನೀತಿ ಕೈ ಬಿಡುವಂತೆ ಒತ್ತಾ ಯಿಸಿ ಹೆಜಮಾಡಿ ಟೋಲ್ ಗೇಟ್ ಸಮೀಪ ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ದ.ಕ. ಜಿಲ...
ಬೆಳ್ತಂಗಡಿ: ಭಾರತದ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ--565 ಟ್ಯಾಂಕ್ ಕೊಡುಗೆಯಾಗಿ ನೀಡಿದೆ. ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಈ ಟ್ಯಾಂಕ್ ಬಳಕೆಯಾಗಿದೆ. 1971ರ ಇಂಡೋ ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಇದು ಬಳಕೆ...
ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ವಾಸವಾಗಿರುವ ಭೋವಿ ಸಮುದಾಯಕ್ಕೆ ನೀಡಲಾಗುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪ್ರಮಾಣ ಪತ್ರವನ್ನು 2018ರಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದ್ದು, ಕೂಡಲೇ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಲು ಪುನರಾರಂಭಿಸಬೇಕು. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ, ಭೋವಿ...
ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರು ಬಳಿ ಬೋಟ್ ನಿಂದ ಮೀನು ಖಾಲಿ ಮಾಡುವಾಗ ಆಕಸ್ಮಿಕವಾಗಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಒರಿಸ್ಸಾ ಮೂಲದ ಪ್ರಮೋದ ಮಿನ್ಜ್(32) ಎಂದು ಗುರುತಿಸಲಾಗಿದೆ. ಇವರು ಗಂಗೊಳ್ಳಿ ಮೂಲದ ಪ್ರಭಾಕರ ಖಾರ್ವಿ ಎಂಬವರ ಶ್ರೀ ಯಕ್ಷೇಶ್ವರಿ ಎಂಬ ಬೋಟಿ...
ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭವಾಗಿದ್ದರೂ, ಸಾರ್ವಜನಿಕರಿಗೆ ಕಾಡಾನೆ ಭೀತಿ ತಪ್ಪಿಲ್ಲ. ಒಂದೆಡೆ ನರ ಹಂತಕ ಆನೆಗಳನ್ನು ಹಿಡಿಯಲು ಹುಡುಕಾಟ ನಡೆಯುತ್ತಿದೆ. ಮತ್ತೊಂದೆಡೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮೈಕ್ ಮೂಲಕ ಜಾಗೃತಿ ಮೂಡಿಸುತ್...