ಬೆಂಗಳೂರು: ಕಾಂಗ್ರೆಸ್ ಶಾಸಕ ಸದನದಲ್ಲಿ ತಮ್ಮ ಅಂಗಿ ಬಿಚ್ಚುವ ಮೂಲಕಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅರಗ ಜ್ಞಾನೇಂದ್ರ ಹಕ್ಕುಚ್ಯುತಿ ಮಂಡಿಸಿದ್ದು, ಈ ವೇಳೆ ಸದನಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿದೆ. ಹಕ್ಕುಚ್ಯುತಿ ಮಂಡನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಳಿಗೆ ಶಿಫಾರಸು ಮಾಡಿದ್ದಾರೆ. ಇದನ್ನು ವಿರೋಧಿಸಿದ ಕಾಂಗ್ರೆಸ್...
ಚಿಕ್ಕಮಗಳೂರು: ತಾಯಿಯ ಅಕ್ರಮ ಸಂಬಂಧಕ್ಕೆ ಮಗಳು ಬಲಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಎಸ್ ಬಿದರೆ ಗ್ರಾಮದಲ್ಲಿ ನಡೆದಿದ್ದು, ತಾಯಿಯ ಆಕ್ರಮ ಸಂಬಂಧದಿಂದ ಮಾನಸಿಕವಾಗಿ ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. 15 ವರ್ಷ ವಯಸ್ಸಿನ ಪೂರ್ಣಿಮಾ ಮೃತಪಟ್ಟ ಬಾಲಕಿಯಾಗಿದ್ದಾಳೆ. ಪ್ರಾಥಮಿಕ ಮಾಹಿತಿಯ ಪ್ರಕಾರ ತಾಯಿಯ ಅನೈತಿ...
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪತ್ರಿಕಾಗೋಷ್ಠಿಯ ಕರೆದ ರಮೇಶ್ ಜಾರಕಿಹೊಳಿ, ಸಿಡಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಿಡಿ ಬಿಡುಗಡೆಯಾಗುವ 26 ಗಂಟೆಗಿಂತ ಮೊದಲೇ ನನಗೆ ಬಿಜೆಪಿ ಹೈಕಮಾಂಡ್ ಫೋನ್ ಮಾಡಿ ತಿಳಿಸಿತ್ತು. ಜೊತೆಗೆ ನೀನು ಧೈರ್ಯವಾಗಿರು, ಕಾನೂನು ಹೋರಾಟ ಮಾಡೋಣ ...
ಹುಬ್ಬಳ್ಳಿ: ಮನೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪತಿಯೋರ್ವ ಪತ್ನಿಯ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದು, ಆಕೆ ಗಂಭೀರವಾಗಿ ಗಾಯಗೊಂಡಾಗ ತಾನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಪವಿತ್ರ ಮಾದರ ಎಂಬ ಮಹಿಳೆ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಪತಿ ಈರಪ್ಪ ಹಲ್ಲೆ ನಡೆಸಿದವನಾಗಿದ್ದಾನೆ. ಈ ದಂಪತಿ ಸುಳ್ಳ ಗ್ರಾಮದಲ್ಲಿ ವಾಸಿಸುತ್ತಿದ್ದರು ...
ಕೊಣಾಜೆ: ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ಹಾಗೂ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಸಂಚಾಲಕನನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು- ಉಳ್ಳಾಲ ವ್ಯಾಪ್ತಿಯ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ನಡೆಸಲಾಗಿತ್ತು. ಇಲ್ಲಿನ ಮೊಂಟೆ ಪದವು ಬಳಿಯ ಮ...
ಕೊಡಗು: ಹುಲಿಯ ದಾಳಿಗೆ 8 ವರ್ಷದ ಬಾಲಕ ಬಲಿಯಾಗಿ 52 ವರ್ಷದ ವೃದ್ಧ ಗಂಭೀರವಾಗಿ ಗಾಯಗೊಂಡ ಘಟನೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದ್ದು, ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ತೋಟದ ಕೆಲಸ ಮಾಡುತ್ತಿದ್ದ ವೇಳೆ ಅಜ್ಜ ಹಾಗೂ ಮೊಮ್ಮಗನ ಮೇಲೆ ಹುಲಿ ದಾಳಿ ನಡೆಸಿದೆ. 52 ವರ್ಷ ವಯಸ್ಸಿನ ತಾತ ಕೆಂಚ ಹುಲಿ ದಾಳಿಯಿಂದ ಗಂಭೀ...
ರಾಯಚೂರು: ನಾಪತ್ತೆಯಾಗಿದ್ದ ಮಾಜಿ ಶಾಸಕರೊಬ್ಬರ ಮೊಮ್ಮಕ್ಕಳಿಬ್ಬರು ಸೋಮವಾರ ಬೆಳಗ್ಗೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದ್ದು, ಮಾನ್ವಿ ತಾಲೂಕಿನ ಮಾಜಿ ಶಾಸಕ ಹಂಪಯ್ಯ ಅವರ ಮೊಮ್ಮಕ್ಕಳು ಮೃತಪಟ್ಟವರಾಗಿದ್ದಾರೆ. ಭಾನುವಾರ ಮಧ್ಯಾಹ್ನ 9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ನಾಪತ್ತೆಯಾಗಿ...
ಬೆಂಗಳೂರು: 2021-22ನೇ ಸಾಲಿನ ರಾಜ್ಯ ಬಜೆಟ್ ಇಂದು ಮಂಡನೆಯಾಗಲಿದ್ದು, ಹಣಕಾಸು ಮಂತ್ರಿಯಾಗಿರುವ ಸಿಎಂ ಯಡಿಯೂರಪ್ಪನವರು ಇಂದು ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು 8ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 2020ರಲ್ಲಿ ಅವರು 7ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದರು. 2006ರಲ್ಲಿ ...
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಶ್ರೀರಾಮ ಸೇನೆಯ ಸಂಸ್ಥಾಪಕ ಮುತಾಲಿಕ್ ಬಿಜೆಪಿ ಬೆನ್ನು ಬಿದ್ದಿದ್ದು, ಬಿಜೆಪಿಯವರು ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ನನಗೆ 66 ವರ್ಷ ವಯಸ್ಸಾಗಿದೆ, ಇದೇ ನನ್ನ ಕೊನೆಯ ಚುನಾವಣೆ. ಹಾಗಾಗಿ ನನಗೆ ಟಿಕೆಟ್ ನೀಡಿ ಎಂದು ತಾನು ಮನವಿ ...
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಪ್ರಕರಣ, ಹಾಗೂ 6 ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಮಾತನಾಡಿದ್ದು, ನನ್ನ ಸಿಡಿ ಇದ್ದರೆ, ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಿ, ಸಿಡಿ ಬಿಡುಗಡೆ ಮಾಡುವವರಿಗೆ ಸ್ವಾಗತ ಎಂದು ಅವರ ಹೇಳಿದ್ದಾರೆ. ನಾನು ಕೋರ್ಟ್ ಮೆಟ್ಟಿಲು ಹತ್ತುವುದಿಲ್ಲ. ನನಗೆ...