1:51 AM Thursday 16 - October 2025

ಸಿಡಿ ಇರುವುದು ಅವರಿಗೆ ಗೊತ್ತಿದೆ, ಅದಕ್ಕೆ ಕೋರ್ಟ್ ಗೆ ಹೋಗಿದ್ದಾರೆ | ಸಿದ್ದರಾಮಯ್ಯ

06/03/2021

ಬೆಂಗಳೂರು: ರಾಜ್ಯ ಬಿಜೆಪಿ ಸಚಿವರ ರಾಸಲೀಲೆ ವಿಚಾರ ಚರ್ಚೆಯಲ್ಲಿರುವಂತೆಯೇ ಇನ್ನೂ 6 ಸಚಿವರು ಕೋರ್ಟ್ ಗೆ ಹೋಗಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ  ಮನವಿ ಮಾಡಿದ್ದಾರೆ, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಮೇಲೆ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಸಚಿವರು ಹೇಳುತ್ತಿದ್ದಾರೆ. ಹೀಗೆ ಹೇಳುವುದಾದರೆ ಸಿಡಿ ಇರುವ ವಿಚಾರ ಸಚಿವರುಗಳಿಗೆ ತಿಳಿದಿರಬೇಕು ಅಲ್ವಾ? ಎಂದು ಪ್ರಶ್ನಿಸಿದರು. ಇದಲ್ಲದೇ,  ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಕಳ್ಳರೇ ಎಂದು ಹೇಳಿದರು.

ನಮ್ಮ ಸರ್ಕಾರವನ್ನು ಬೀಳಿಸಿದವರ ಮೇಲೆ ನಮಗೆ ಯಾವುದೇ ಅನುಕಂಪ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.  ಅವರಿಗೆ ಸಿಡಿ ಇರುವುದು ಮೊದಲೇ ಗೊತ್ತಿರಬೇಕು. ಹಾಗಾಗಿ ಅವರು  ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಬಾಂಬೆ ಮಿತ್ರಮಂಡಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version