ಯುದ್ಧ ವಿರಾಮ: ಗಾಝಾದಲ್ಲಿ ತಮ್ಮ ಮನೆ ಹುಡುಕಾಡುತ್ತಿರುವ ನಿವಾಸಿಗಳು

gaza
11/10/2025

ಗಾಜಾ: ಇಸ್ರೇಲ್​ ಮತ್ತು ಹಮಾಸ್​ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಸಿವೆ. ಈ ಮೂಲಕ ಎರಡು ವರ್ಷದ ಯುದ್ಧ ಅಂತ್ಯಕಂಡಿದೆ. ಯುದ್ಧದ ಹಿನ್ನೆಲೆ ಮನೆ ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದ 10 ಸಾವಿರಕ್ಕೂ ಅಧಿಕ ಗಾಜಾ ನಿವಾಸಿಗಳು ಇದೀಗ ಮರಳಿ ಗಾಜಾಕ್ಕೆ ಆಗಮಿಸುತ್ತಿದ್ದಾರೆ.

ಶಾಂತಿ ಒಪ್ಪಂದದಂತೆ ಗಾಜಾದಿಂದ ಇಸ್ರೇಲ್ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಆದರೆ ಒಪ್ಪಂದಲ್ಲಿ ಗಾಜಾ ಆಡಳಿತ ಯಾರು ನಿರ್ವಹಿಸಲಿದ್ದಾರೆ ಮತ್ತು ಹಮಾಸ್​ ನ ಮುಂದಿನ ನಡೆ ಏನು ಎನ್ನುವುದು ಸ್ಪಷ್ಟವಾಗಿಲ್ಲ.

ಮಾರ್ಚ್‌ನಲ್ಲಿ ಕದನ ವಿರಾಮವನ್ನು ಏಕಪಕ್ಷೀಯವಾಗಿ ಕೊನೆಗೊಳಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸದಿದ್ದರೆ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಲಿದೆ ಎಂದು ಸುಳಿವು ನೀಡಿದ್ದರು.

ಹಮಾಸ್​ ನಡೆಸಿದ ಭೀಕರ ದಾಳಿಯಿಂದ ಎರಡು ವರ್ಷಗಳ ಕಾಲ ನಡೆದ ಯುದ್ಧ ನಿಲ್ಲಿಸಲು ಹಮಾಸ್ ಮತ್ತು ಇಸ್ರೇಲ್ ಒಪ್ಪಿಗೆ ನೀಡಿವೆ. ಶುಕ್ರವಾರದಿಂದ ಈ ಕದನ ವಿರಾಮ ಆರಂಭವಾಗಿದೆ. ಸೋಮವಾರ ಒತ್ತೆಯಾಳುಗಳು ಬಿಡುಗಡೆಯಾಗಲಿದ್ದಾರೆ. ಶುಕ್ರವಾರದಿಂದ ಗಾಜಾದ ಕೆಲವು ಭಾಗಗಳಲ್ಲಿ ಭಾರೀ ಶೆಲ್ ದಾಳಿಗಳು ನಿಂತಿದೆ ಎಂದು ಪ್ಯಾಲೆಸ್ಟೀನಿಯನ್ನರು ತಿಳಿಸಿದ್ದಾರೆ.

ಎರಡು ವರ್ಷಗಳ ಕಾಲ ನಡೆದ ಈ ಯುದ್ದಲ್ಲಿ ಸುಮಾರು 2 ಮಿಲಿಯನ್​ ಜನಸಂಖ್ಯೆ ಹೊಂದಿರುವ ಗಾಜಾಪಟ್ಟಿಯಲ್ಲಿನ ಶೇ 90ರಷ್ಟು ಜನರು ಸ್ಥಳಾಂತರಗೊಂಡಿದ್ದರು. ವಿನಾಶಕಾರಿ ಹಾನಿಗೆ ತುತ್ತಾಗಿರುವ ಗಾಜಾ ಪಟ್ಟಿಗೆ ಮರಳುತ್ತಿರುವ ಜನರು ಇದೀಗ ತಮ್ಮ ಮನೆಯ ಅಸ್ತಿತ್ವದ ಹುಡುಕಾಟ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version