ನೊಬೆಲ್ ಕೈತಪ್ಪಿದ್ದಕ್ಕೆ ಟ್ರಂಪ್ ಹೇಳಿದ್ದೇನು?

trump
11/10/2025

Nobel Peace Prize — ವಾಷಿಂಗ್ಟನ್: ನೊಬೆಲ್ ಪ್ರಶಸ್ತಿ ಕೈತಪ್ಪಿದ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಪ್ರತಿಕ್ರಿಯೆ ನೀಡಿದ್ದಾರೆ. ನೊಬೆಲ್ ಪ್ರಶಸ್ತಿ ತನಗೆ ಈ ಬಾರಿ ನೀಡಬೇಕು ಎಂದು ಟ್ರಂಪ್ ಬಹಿರಂಗವಾಗಿ ಹೇಳಿದ್ದರು. ವಿವಿಧ ದೇಶಗಳ ಯುದ್ಧ ತಾನು ನಿಲ್ಲಿಸಿದ್ದಕ್ಕಾಗಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ತನಗೆ ನೀಡಬೇಕು ಎಂದು ಟ್ರಂಪ್ ಆಸೆಪಟ್ಟಿದ್ದರು. ಆದ್ರೆ ಇದೀಗ  ನೊಬೆಲ್ ವೆನೆಜುವೆಲಾದ ಮರಿಯಾ ಕೊರಿನಾ ಮಚಾದೋ ಅವರ ಮುಡಿಗೇರಿದೆ. ಇದರ ಬೆನ್ನಲ್ಲೇ ಇದೀಗ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ.

“ನನಗೆ ಪ್ರಶಸ್ತಿ ಕೊಡಿ ಎಂದು ನಾನು ಕೇಳಲಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೇ ನೊಬೆಲ್ ಪ್ರಶಸ್ತಿ ವಿಜೇತ ಮರಿಯಾ ಕೊರಿನಾ ಮಚಾದೋ ಅವರು ನನಗೆ ಕರೆ ಮಾಡಿದ್ದರು ಎಂದು ತಿಳಿಸಿದ್ದಾರೆ.

ನಾನು ಹಲವಾರು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದ ಅವರು ತನಗೆ ತಾನೇ ಕೃತಜ್ಞತೆಯನ್ನು ಹೇಳುವ ಮೂಲಕ ನೊಬೆಲ್ ಸಮಿತಿಯ ನಿರ್ಧಾರವನ್ನು ಪರೋಕ್ಷವಾಗಿ ಟೀಕಿಸಿದರು. ಅಲ್ಲದೇ ಮರಿಯಾ ಕೊರಿನಾ ಮಚಾದೋ ನನಗೆ ಕರೆ ಮಾಡಿ, ಈ ಪ್ರಶಸ್ತಿಗೆ ನೀವು ಅರ್ಹರು, ನಿಮ್ಮ ಗೌರವಾರ್ಥವಾಗಿ ನಾನು ಈ ಪ್ರಶಸ್ತಿ ಸ್ವೀಕರಿಸುವುದಾಗಿ ಹೇಳಿದರು. ನಾನು ಅವರ ಬಳಿ ಆ ಪ್ರಶಸ್ತಿ ನನಗೆ ಕೊಡಿ ಎಂದು ಕೇಳಿಲ್ಲ, ಅವರು ತುಂಬಾ ಒಳ್ಳೆಯವರು ಎಂದು ಟ್ರಂಪ್ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version