ಕಾಗುಣಿತ ತಪ್ಪಾಗಿದ್ದಕ್ಕೆ ತಹಶೀಲ್ದಾರ್ ಗೆ  ನೋಟಿಸ್!

sudarshan
20/04/2025

ಚಿಕ್ಕಬಳ್ಳಾಪುರ: ಪತ್ರದಲ್ಲಿ ಕಾಗುಣಿತ ತಪ್ಪಾಗಿರುವ ಹಿನ್ನೆಲೆ  ಚಿಂತಾಮಣಿ ತಹಶೀಲ್ದಾರ್ ಗೆ  ನೋಟಿಸ್ ನೀಡಲಾಗಿರುವ ಘಟನೆ ನಡೆದಿದೆ.

ಚಿಂತಾಮಣಿ ತಹಶೀಲ್ದಾರ್ ಸುದರ್ಶನ್‌ ಅವರಿಗೆ ಚಿಕ್ಕಬಳ್ಳಾಪುರ ಡಿಸಿ ಪಿ.ಎನ್‌ ರವೀಂದ್ರ ಅವರು ನೋಟಿಸ್‌ ನೀಡಿದ್ದು,  ಒಂದು ವಾರದೊಳಗೆ ನೋಟಿಸ್ ಗೆ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.

ತಾಲೂಕು ಕಚೇರಿ ಎದುರು ಧರಣಿ ಮಾಡಲು ಶಂಬೂಕ ಸಂಘರ್ಷ ಸಮಿತಿ ಅನುಮತಿ ಕೋರಿ ತಹಶೀಲ್ದಾರ್‌ ಗೆ ಮನವಿ ಪತ್ರ ನೀಡಿತ್ತು. ಇದಕ್ಕೆ ತಹಶೀಲ್ದಾರ್‌ ಅವರು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿವಳಿಕೆ ಪತ್ರ ನೀಡಿದ್ದರು.  ತಿಳಿವಳಿಕೆ ಪತ್ರದಲ್ಲಿ ಸರಳ ಕನ್ನಡ ಪದಗಳನ್ನ ತಪ್ಪಾಗಿ ನಮೂದು ಮಾಡಲಾಗಿತ್ತು. ಈ ಬಗ್ಗೆ ಶಂಬೂಕ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸೂರ್ಯಕಿರಣ್‌ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಈ ದೂರಿನ ಹಿನ್ನೆಲೆ ಜಿಲ್ಲಾಧಿಕಾರಿ ಪಿ.ಎನ್‌ ರವೀಂದ್ರ ಅವರು ತಹಶೀಲ್ದಾರ್‌ ಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version