ಚಿಕ್ಕಮಗಳೂರು | ದೇವೀರಮ್ಮನ ಜಾತ್ರಾ ಮಹೋತ್ಸವ: ಜಿಲ್ಲಾಡಳಿತರಿಂದ ಮಾರ್ಗಸೂಚಿ ಬಿಡುಗಡೆ

devirammana jatra mahotsava
14/10/2025

ಚಿಕ್ಕಮಗಳೂರು: ಇದೇ ಭಾನುವಾರ-ಸೋಮವಾರ ದೇವೀರಮ್ಮನ ಜಾತ್ರಾ ಮಹೋತ್ಸವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಪ್ರತಿ ವರ್ಷ 60–70 ಸಾವಿರಕ್ಕೂ ಹೆಚ್ಚು ಭಕ್ತರು 5 ಕಿ.ಮೀ. ಬೆಟ್ಟ ಹತ್ತಿ  ದೇವೀರಮ್ಮನ ದರ್ಶನ ಪಡೆಯುತ್ತಾರೆ.

15 ವರ್ಷ ಮೇಲ್ಪಟ್ಟು 60 ವರ್ಷ ಒಳಗಿನವರು ಮಾತ್ರ ಬೆಟ್ಟ ಹತ್ತಬೇಕು , ಪ್ರವಾಸಿ ತಾಣ ಹಾಗೂ ಭಕ್ತರ ನಡುವೆ ಜನಸಂದಣಿ ತಡೆಗೆ ಜಿಲ್ಲಾಡಳಿತ ಕ್ರಮ ವಹಿಸಲಿದೆ, 19ರ ಬೆಳಗ್ಗೆ 6 ಗಂಟೆಯಿಂದ 20ರ ಸಂಜೆ 6 ಗಂಟೆವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ದತ್ತಪೀಠ, ಮಾಣಿಕ್ಯಾಧಾರ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರದಂತೆ ಮನವಿ ಮಾಡಲಾಗಿದೆ.

ಹೋಂ ಸ್ಟೇ, ರೆಸಾರ್ಟ್ ಬುಕ್ ಮಾಡಿರುವವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ, ರಾಜ್ಯ ಹೆದ್ದಾರಿ ತರೀಕೆರೆ ಮಾರ್ಗವನ್ನ ಬಿಂಡಿಗ ದೇವೀರಮ್ಮನ ಭಕ್ತರಿಗೆ ಜಿಲ್ಲಾಡಳಿತ ಮೀಸಲಿಟ್ಟಿದೆ.  ಅನ್ಯ ಕಾರ್ಯದ ನಿಮಿತ್ತ ಚಿಕ್ಕಮಗಳೂರಿಗೆ ಬರುವವರು ಕಡ್ಡಾಯವಾಗಿ ಕಡೂರು ಮಾರ್ಗದಲ್ಲಿ ಬರುವಂತೆ ಸೂಚನೆ ನೀಡಲಾಗಿದೆ. ಭಕ್ತರಿಗೆ ವರ್ಷಕ್ಕೊಮ್ಮೆ ದರ್ಶನ ನೀಡುವ ಬೆಟ್ಟದ ಮೇಲಿರೋ ಬಿಂಡಿಗ ದೇವೀರಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version