10:35 AM Wednesday 21 - January 2026

ಮೇಲಾಧಿಕಾರಿ ಕಿರುಕುಳ: ಡೆತ್ ನೋಟ್ ಬರೆದಿಟ್ಟು ಕೆಎಸ್ ಆರ್ ಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ!

19/04/2025

ಚಿಕ್ಕಮಗಳೂರು‌:   ಮೇಲಾಧಿಕಾರಿ ಕಿರುಕುಳ ಆರೋಪಿಸಿ ಸರ್ಕಾರಿ ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇಲಾಧಿಕಾರಿ ಪುಟ್ಟಸ್ವಾಮಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ಕೆ.ಎಸ್.ಆರ್.ಟಿ.ಸಿ. ಚಾಲಕ ಚಂದ್ರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹುಷಾರಿಲ್ಲದೇ ಬಾರದಿದ್ದಕ್ಕೆ ಹಾಜರಾತಿಯಲ್ಲಿ ಗೈರು ಹಾಕಿದ್ದಾರೆ, ನನ್ನ ಖಾತೆಯಲ್ಲಿ ಸಾಕಷ್ಟು ರಜೆ ಇದೆ, ಆದರೂ ಗೈರು ಹಾಕಿದ್ದಾರೆ ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಹಣ ಕೊಟ್ಟರೆ ಎಷ್ಟು ದಿನ ಬೇಕಾದ್ರು ರಜೆ ನೀಡುತ್ತಾರೆ ಎಂದು ಎಟಿಎಸ್ ಪುಟ್ಟಸ್ವಾಮಿ ವಿರುದ್ಧ ಆರೋಪ ಮಾಡಿರುವ ಚಂದ್ರು, ಪುಟ್ಟಸ್ವಾಮಿಯಿಂದ ನೌಕರರ ಮೇಲಾಗುತ್ತಿರು ದೌರ್ಜನ್ಯ ಸರಿಪಡಿಸುವಂತೆ ಒತ್ತಾಯಿಸಿ  ಕಡೂರು ಡಿಪೋದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಚಂದ್ರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version