1:08 AM Thursday 11 - December 2025

ಚಿಕ್ಕಮ್ಮನ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್ ಮೇಲ್: ಇಬ್ಬರ ಬಂಧನ

bangalore
20/07/2022

ಬೆಂಗಳೂರು: ಚಿಕ್ಕಮ್ಮನ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ನಂತರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲೂರಿನ ನಿವಾಸಿ ಉಷಾ(24) ಮತ್ತು ಸುರೇಶ್ ಬಾಬು(31) ಬಂಧಿತರು. ಆರೋಪಿಗಳ ಪೈಕಿ ಉಷಾ ಸಂತ್ರಸ್ತೆಯ ಸಹೋದರಿಯ ಪುತ್ರಿಯಾಗಿದ್ದಾಳೆ. ಇತ್ತೀಚೆಗೆ ಸಂತ್ರಸ್ತೆ ಹಾಗೂ ಆಕೆಯ ಪ್ರಿಯಕರ ಹೋಟೆಲ್‌ ಗೆ ಹೋಗಲು ಕೊಠಡಿ ಕಾಯ್ದಿರಿಸಿದ್ದರು. ಈ ವಿಚಾರ ತಿಳಿದುಕೊಂಡ ಆರೋಪಿಗಳು ಮೊದಲೇ ಆ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಪ್ರಿಯಕರ ಖಾಸಗಿಯಾಗಿ ಕಳೆದ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ.

ಹೀಗಾಗಿ ಸಂತ್ರಸ್ತೆ ದೂರು ನೀಡಿದ್ದರು. ತನಿಖೆ ವೇಳೆ ಉಷಾಲ ಕೃತ್ಯ ಬಯಲಾಗಿದ್ದು, ಆಕೆಯ ಬಂಧಿಸಿದಾಗ ಸತ್ಯಾಂಶ ಬಯಲಾಗಿದೆ. ಬಳಿಕ ಆಕೆಯ ಪ್ರಿಯಕರ ಸುರೇಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂತ್ರಸ್ತೆ ಮೊಬೈಲ್‌ ಗೆ ವಿಡಿಯೋ ಕಳುಹಿಸಿದ ಆರೋಪಿ, 25 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಸಂಬಂಧಿಕರು, ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು  ಬ್ಲಾಕ್ ಮೇಲ್ ಮಾಡಿದ್ದಾನೆ. ಆಕೆ, ಒಪ್ಪದಿದ್ದಾಗ, ಹಿಂಬಾಲಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version