ಸೇದಿ ಎಸೆದಿದ್ದ ತುಂಡು ಬೀಡಿ ನುಂಗಿದ ಮಗು ಸಾವು

news releted image
16/06/2025

ಮಂಗಳೂರು:  ತಂದೆಯ ನಿರ್ಲಕ್ಷ್ಯಕ್ಕೆ ಮಗುವೊಂದು ಬಲಿಯಾಗಿರುವ ಘಟನೆ  ಮಂಗಳೂರು ನಗರದ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದ್ದು, ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಮೃತಪಟ್ಟ ಮಗುವಾಗಿದೆ.

ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮನೆಯೊಳಗೆ ಅರ್ಧ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ಮಗು ಬಾಯಿಗೆ ಹಾಕಿ, ನುಂಗಿದೆ. ಬಳಿಕ ಅಸ್ವಸ್ಥಗೊಂಡಿದ್ದು, ಮಗುವನ್ನು  ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಗ್ಗೆ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಗಂಡನ ವಿರುದ್ಧ ಮಗುವಿನ ತಾಯಿ ಲಕ್ಷ್ಮೀ ದೇವಿ ದೂರು ನೀಡಿದ್ದಾರೆ.  ಮನೆಯೊಳಗೆ ಬೀಡಿ ಸೇದಿ ಎಸೆಯಬೇಡಿ ಎಂದು ಸಾಕಷ್ಟು ಬಾರಿ ಗಂಡನಿಗೆ ಹೇಳಿದರೂ, ಆತ ಮತ್ತೆ ಮತ್ತೆ ಎಸೆದಿದ್ದಾನೆ. ಇದರಿಂದಾಗಿ ಮಗು ಪ್ರಾಣ ಕಳೆದುಕೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version