9:57 AM Tuesday 16 - September 2025

ಸಿಮ್ ಕಾರ್ಡ್ ತರುವುದಾಗಿ ಹೇಳಿ ಹೊರಟಿದ್ದ ಮಹಿಳೆ ನಾಪತ್ತೆ!

priya t m
27/12/2022

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಬಂಗಟ ಮನೆ ನಿವಾಸಿ ಜೋನ್ ಮೋನಿಸ್ ಎಂಬವರ ಪತ್ನಿ ಪ್ರಿಯಾ ಟಿ.ಎಂ  (37)  ರವರು ಡಿ. 22ರಂದು ಮಡಂತ್ಯಾರಿಗೆ ಹೋಗಿ ಮೊಬೈಲ್ ಸಿಮ್ ಕಾರ್ಡ್ ತರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಂದಿಲ್ಲ.

ಅವರ ಬಳಿ ಇದ್ದ ಎರಡು ಮೊಬೈಲ್ ನಂಬರ್ ಗಳು ಕೂಡ ಸ್ವಿಚ್ ಆಫ್ ಆಗಿದ್ದು ಎಲ್ಲಾ ಕಡೆ ಹುಡುಕಾಡಿದರೂ ಇದುವರೆಗೆ ಪತ್ತೆಯಾಗಿಲ್ಲ ಎಂದು ಪತಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಮನೆಯಿಂದ ಹೊರಟ ವೇಳೆ ನೀಲಿ ಬಣ್ಣದಲ್ಲಿ ಬಿಳಿಹೂಗಳಿರುವ ಚೂಡಿದಾರದ ಟಾಪ್ ಮತ್ತು ನೀಲಿ ಬಣ್ಣ ಲೆಗ್ಗಿನ್ ಪ್ಯಾಂಟ್ ಧರಿಸಿದ್ದು, ಇವರು ಸುಮಾರು 5 ಅಡಿ 2 ಇಂಚು ಉದ್ದವಿದ್ದು ಸಾಧಾರಣ ಮೈಕಟ್ಟು ಹೊಂದಿದ್ದು ಬೂದು ಮೈಬಣ್ಣದವರಾಗಿದ್ದು, ಕನ್ನಡ, ಮಲೆಯಾಳಿ, ಕೊಂಕಣಿ ಮತ್ತು ತುಳು ಭಾಷೆ ಮಾತನಾಡುತ್ತಾರೆ.

ಇವರು ಪತ್ತೆಯಾದಲ್ಲಿ ಕೂಡಲೇ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರ ಮೊಬೈಲ್ ನಂಬ್ರ: 9480805370 ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08256-232093ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version