12:45 AM Saturday 23 - August 2025

ಬಿಹಾರದ ಬಕ್ಸಾರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲಿನ ಬೋಗಿ: ತಪ್ಪಿದ ದೊಡ್ಡ ಅನಾಹುತ

16/10/2023

ಬಿಹಾರದ ಬಕ್ಸಾರ್ ನಗರದ ಡುಮ್ರಾನ್ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಬೋಗಿ ಹಳಿ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರೈಲಿನ ಒಂದು ಬೋಗಿ ಹಳಿಯಿಂದ ಕೆಳಗಿಳಿದು ಈ‌ ಘಟನೆ ನಡೆದಿದೆ.

ಈ ಘಟನೆ ನಡೆದಾಗ ಗೂಡ್ಸ್ ರೈಲು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ನಿಂದ ಬಕ್ಸಾರ್ ಮೂಲಕ ಫತುಹಾಗೆ ಹೋಗುತ್ತಿತ್ತು.
ಈ ಕುರಿತು ಮಾಹಿತಿ ತಿಳಿದ ತಕ್ಷಣ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ಣಯಿಸಲು ಸ್ಥಳಕ್ಕೆ ಧಾವಿಸಿದರು.

ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಬೋಗಿಯನ್ನು ಸ್ಥಳಾಂತರಿಸಲು ಮತ್ತು ಬಾಧಿತ ರೈಲ್ವೆ ಮಾರ್ಗವನ್ನು ಸರಿಪಡಿಸಲು ಸದ್ಯ ಕಾರ್ಯಾಚರಣೆ ನಡೆಯುತ್ತಿವೆ.

ಇತ್ತೀಚಿನ ಸುದ್ದಿ

Exit mobile version