10:34 AM Saturday 23 - August 2025

ಕಾಫಿ ನಾಡು ಚಂದುಗೆ ಧಮ್ಕಿ: ಬಾಡಿಗೆ ಮಾಡಲು ಬಿಡದೇ ಕಾಡಿದ ಯುವಕರು!

coffeenaduchandu
24/08/2022

ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್ ಡೇ ಹಾಡುಗಳ ಮೂಲಕ ಫೇಮಸ್ ಆಗಿರುವ ಕಾಫಿ ನಾಡ ಚಂದುಗೆ ಇದೀಗ ಎಲ್ಲಿ ಹೋದ್ರೂ, ಅಭಿಮಾನಿಗಳದ್ದೇ ಕಾಟ. ರಸ್ತೆ ನಡುವೆ ಚಂದುವನ್ನು ತಡೆದು ವಿಡಿಯೋ ಮಾಡುವಂತೆ ಒತ್ತಾಯಿಸುವವರಿಗೇನೂ ಕಡಿಮೆ ಇಲ್ಲ ಎಂಬಂತಾಗಿದೆ.

ಈ ನಡುವೆ ಕಾಫಿ ನಾಡು ಚಂದು ಬೆಳವಣಿಗೆ ಸಹಿಸದೇ ಕೆಲವು ಜನರು ಕಾಫಿ ನಾಡು ಚಂದುವನ್ನು ಟಾರ್ಗೆಟ್ ಕೂಡ ಮಾಡುತ್ತಿದ್ದಾರೆ. ಒಂದೆಡೆ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿರುವ ಚಂದು ಇನ್ನೊಂದೆಡೆ ಶತ್ರುಗಳ ಟ್ರೋಲ್ ಗಳಿಗೂ ಸಿಲುಕಿದ್ದಾರೆ.

ಬರ್ತ್ ಡೇ ಹಾಡುಗಳನ್ನು ಹೇಳುತ್ತಲೇ ಟಿವಿ ವೇದಿಕೆಗೂ ಹತ್ತಿದ ಚಂದು ಇದೀಗ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದ್ದರೂ, ತನ್ನ ವೃತ್ತಿ ಜೀವನ ಬಿಡದ ಕಾಫಿ ನಾಡು ಚಂದು ಬಾಡಿಗೆ ಅರಸಿ ಹೋಗುತ್ತಿದ್ದ ವೇಳೆ, ಕೆಲವರು ನಮ್ಮ ಜೊತೆ ವಿಡಿಯೋ ಮಾಡು, ಲೈವ್ ಗೆ ಹೋಗು ಎಂದು ಧಮ್ಕಿ ಹಾಕಿದ್ದಾರೆ. ಈ ವೇಳೆ ಚಂದು ನಾನು ಬಾಡಿಗೆಗೆ ಮಾಡ್ತಿದ್ದೇನೆ. ಸಂಜೆ ವಿಡಿಯೋ ಮಾಡಿಕೊಡುತ್ತೇನೆ ಎಂದಾಗ, ನಿನ್ಗೆ ಚಿಕ್ಕಮಗಳೂರಿನವರು ಈಗ ಬೇಡ್ವಾ? ಎಂದು ಕೇಳಿದಾಗ, ಈಗ ವಿಡಿಯೋ ಮಾಡಲು ಆಗುವುದಿಲ್ಲ, ಸಂಜೆ ನಾಲ್ಕು ಗಂಟೆಗೆ ಮಾಡಿಕೊಡ್ತೇನೆ ಎಂದಿದ್ದಾರೆ. ಈ ವೇಳೆ, ಹೋಗೋ, ನನ್ನ ಮಗನೆ ನಮ್ಮಿಂದಾಗಿ ನೀನಾಗಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕೆಲವೊಂದು ಜನರಿಂದಾಗಿ ಇದೀಗ ಕಾಫಿ ನಾಡ ಚಂದು ತನ್ನ ದುಡಿಮೆಯನ್ನು ಸರಿಯಾಗಿ ಮಾಡಲಾಗದ ಪರಿಸ್ಥಿತಿಗೆ ಬಂದಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ ಎನ್ನುವ ಮಾತುಗಳು ಇದೀಗ ಕೇಳಿ ಬಂದಿದೆ.

ಕಾಫಿ ನಾಡು ಚಂದು(coffee nadu chandu)ಗೆ ಧಮ್ಕಿ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version