ಕಾಫಿ ನಾಡು ಚಂದು ಆಸೆ ಈಡೇರಿತು!: ಶಿವರಾಜ್ ಕುಮಾರ್ ಅವರನ್ನು ಭೇಟಿಯಾದ ಚಂದು!
ರೀಲ್ಸ್ ಹೀರೋ ಮಾತ್ರ ಅಲ್ಲ, ಸಮಾಜ ಸೇವಕರೂ ಆಗಿರುವ ಕಾಫಿ ನಾಡಿನ ಚಂದು, ತಮ್ಮದೇ ಶೈಲಿಯ ಹಾಡು ಡಾನ್ಸ್ ಗಳು, ಮುಗ್ದತೆಯ ಮಾತುಗಳಿಂದ ಜನರಿಗೆ ಹತ್ತಿರವಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಚಂದು, ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯೂ ಹೌದು.
ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ, ಕಾಫಿ ನಾಡು ಚಂದು ಮಾಡುವ ನಮಸ್ಕಾರಗಳು ಎಂಬ ವಾಕ್ಯಗಳೊಂದಿಗೆ ವಿಡಿಯೋ ಆರಂಭಿಸುವ ಚಂದು ಇತ್ತೀಚೆಗೆ ತಮ್ಮ ಹಾಡಿನ ಮೂಲಕ ಶಿವರಾಜ್ ಕುಮಾರ್ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದರು.
ನಿಮ್ಮನು ನೋಡ್ಬೇಕು, ಮಾತಾಡ್ಬೇಕು, ನಿಮ್ ಜೊತೆ ಕಾಫಿ ಕುಡಿಬೇಕು ಎಂದು ಹಾಡಿನ ಮೂಲಕವೇ ಚಂದು ಬೇಡಿಕೆ ಇಟ್ಟಿದ್ದರು. ಜೊತೆಗೆ ಆ್ಯಂಕರ್ ಅನುಶ್ರೀ ಅವರಿಗೂ ವಿಶೇಷ ಮನವಿ ಮಾಡಿಕೊಂಡಿದ್ದರು.
ಇದೀಗ ಕಾಫಿ ನಾಡು ಚಂದು ಅವರ ವಿಶೇಷ ಬೇಡಿಕೆಯನ್ನು ಝೀ ಕನ್ನಡ ವಾಹಿನಿ ನನಸಾಗಿಸಿದ್ದು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’(Dance Karnataka Dance) ಶೋಗೆ ಚಂದು ಅವರನ್ನು ಕರೆಸಲಾಗಿದ್ದು, ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿಸಲಾಗಿದೆ. ಜೊತೆಗೆ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ಹಾಡುವ ಅವಕಾಶ ಕೂಡ ಚಂದುಗೆ ಸಿಕ್ಕಿದೆ ಈ ವಿಶೇಷ ಸಂಚಿಗೆ ಝೀ ಕನ್ನಡದಲ್ಲಿ ಮೂಡಿಬರಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























