9:03 AM Wednesday 27 - August 2025

ಸಿದ್ದು ಹುಲಿ, ಡಿಕೆಶಿ ಸಿಂಹ, ಕಾಂಗ್ರೆಸ್ ಎಲ್ಲರಿಗೂ ತಂದೆ–ತಾಯಿ  ಎಂದ ಹಾಸ್ಯ ನಟ ಸಾಧುಕೋಕಿಲ

sabhu kokila
22/02/2023

ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ನಟ ಸಾಧುಕೋಕಿಲ ಹೇಳಿದರು.

ಚಾಮರಾಜನಗರ ಜಿಲ್ಲೆಯ:

ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ನಟ‌ ಸಾಧು‌ಕೋಕಿಲ ಮಾತನಾಡಿ, ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ದಿನ ನಮ್ಮನ್ನು ಕರೆತಂದಿದ್ದು ಕಾಂಗ್ರೆಸ್, ಕಾಂಗ್ರೆಸ್ ಗೆ ಮೋಸ ಮಾಡಿದರೇ ತಂದೆತಾಯಿಗೆ ಮೋಸ ಮಾಡಿದಂತೆ, ಕಾಂಗ್ರೆಸ್ ಗೂ ಮತ್ತು ಜನರಿಗೂ ಇರುವ ಸಂಬಂಧ ಕೇವಲ ರಾಜಕೀಯದ್ದಲ್ಲ, ಹೃದಯದ ಸಂಬಂಧ ಎಂದರು.

ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹುಲಿ ಇದ್ದಂತೆ ಡಿ.ಕೆ.ಶಿವಕುಮಾರ್ ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಏತಕ್ಕೆ, ಕಾಂಗ್ರೆಸ್ ನವರಿಗೆ ಓಟ್ ಹಾಕಿ ಎಂದು ಬೇಡಬೇಕಾ..?? ಕಾಂಗ್ರೆಸ್ ಗೆ ಮತ ಹಾಕುವುದು ನಮ್ಮ ಕರ್ತವ್ಯ, ಕಾಂಗ್ರೆಸ್ ಗೆ ಮತ ಹಾಕದಿದ್ದರೇ ತಂದೆ-ತಾಯಿಗೆ ಮೋಸ ಮಾಡಿದಂತೆ ಎಂದು ಹೇಳಿದರು.

ಗಣೇಶ್ ಪ್ರಸಾದ್ ಗೆ ಕೈ ಟಿಕೆಟ್ ಘೋಷಣೆ:

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಎಚ್.ಎಂ.ಗಣೇಶ್ ಪ್ರಸಾದ್ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.

ಗುಂಡ್ಲುಪೇಟೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಗಣೇಶ್ ಪ್ರಸಾದ್ ಅವರ ಕೈಯನ್ನು ಈ ಬಾರಿ ಬಲಪಡಿಸಿ, ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿ ಎನ್ನುವ ಮೂಲಕ ಅಭ್ಯರ್ಥಿ ಹೆಸರನ್ನು ಫೈನಲ್ ಮಾಡಿದರು.

ಭ್ರಷ್ಟ, ದರಿದ್ರ ಬಿಜೆಪಿ ಸರ್ಕಾರ ಹೋಗಲಾಡಿಸಲು ಪ್ರತಿಯೊಬ್ಬ ಮತದಾರನೂ ಕೂಡ ಪ್ರತಿಜ್ಞೆ ಮಾಡಬೇಕು, ಈ‌ ಹಿಂದೆ ನಡೆದ ಉಪ ಚುನಾವಣೆಯನ್ನು ನಾನೊಬ್ಬ ಕಾರ್ಯಕರ್ತನಾಗಿ ಕೆಲಸ ಮಾಡಿ ಗೀತಾ ಮಹದೇವಪ್ರಸಾದ್ ಅವರನ್ನು ಗೆಲ್ಲಿಸಿದ್ದೇವು. ಆ ಚುನಾವಣಾ ಗೆಲುವನ್ನು ನಾವು ಉಳಿಸಿಕೊಳ್ಳಲು ಆಗಲಿಲ್ಲ. ಈಗ ನಿಮ್ಮ ಸಮಸ್ಯೆ, ದುಃಖ ದುಮ್ಮಾನ ಕೇಳಲು ನಾವು ಇಂದು‌ ಇಲ್ಲಿಗೆ ಬಂದಿದ್ದು ಕಾಂಗ್ರೆಸ್ ಬಲಪಡಿಸಿ ಎಂದು ಹೇಳಿದರು.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ನಿರಂಜನಕುಮಾರ್ ಯಾವುದೇ‌ ಶಾಶ್ವತ ಯೋಜನೆ ತಂದಿಲ್ಲ. ಒಂದು ಉದ್ಯೋಗ ನೀಡಿಲ್ಲ. ಆಕ್ಸಿಜನ್ ದುರಂತದಲ್ಲಿ ಯಾರಿಗೂ ಸಹಾಯ ಮಾಡಲಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಗಣೇಶ್ ಪ್ರಸಾದ್ ಗೆಲ್ಲಿಸಬೇಕು ಎಂದು ಕರೆಕೊಟ್ಟರು.

ರಾಜ್ಯದಲ್ಲಿ 141 ಸೀಟ್ ಕಾಂಗ್ರೆಸ್ ಗೆಲ್ಲುವ ಮೂಲಕ ಪಕ್ಷ ಅಧಿಕಾರಕ್ಕೆ ಬರುತ್ತದೆ‌ ಎಂದು ನಮ್ಮ‌ ರಿಪೋರ್ಟ್ ಹೇಳುತ್ತಿದೆ, ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version