ಮುಂದುವರಿದ ಕಾವೇರಿ ಕಾವು: ಕುಡಿಕೆಯಲ್ಲಿ ನೀರು ತುಂಬಿಸಿ ಕೊಂಡು ವಿನೂತನ ಪ್ರತಿಭಟನೆ

kaveri
04/09/2023

ಚಾಮರಾಜನಗರ: ಚಾಮರಾಜನಗರದಲ್ಲಿ ಕಾವೇರಿ ಕಾವು ಮುಂದುವರಿದಿದ್ದು,  ಕುಡಿಕೆಯಲ್ಲಿ ನೀರು ತುಂಬಿಸಿ ಕೊಂಡು ವಿನೂತನವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ.

ಕುಡಿಕೆ ನೀರು ಕರ್ನಾಟಕಕ್ಕೆ, ಕ್ಯೂಸೇಕ್ಸ್ ನೀರು ತಮಿಳುನಾಡಿಗೆ ಎಂದು ಕನ್ನಡ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಕೇಂದ್ರ ಹಾಗೂ ರಾಜ್ಯ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು   ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಭುವನೇಶ್ವರಿ ವೃತ್ತದವರವಿಗೂ ಕುಡಿಕೆ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ರಾಷ್ಟ್ರೀಯ ಹೆದ್ದಾರಿಯ ಭುವನೇಶ್ವರಿ ವೃತ್ತದ ಬಳಿ ಕೆಲಕಾಲ ಧರಣಿ ನಡೆಸಿದ ಕಾರ್ಯಕರ್ತರು ಕಾವೇರಿ ನೀರು ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

Exit mobile version