12:26 AM Thursday 21 - August 2025

ಹರ್ಯಾಣದಲ್ಲಿ ಭೂಪಿಂದರ್ ಹೂಡಾ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಪೊಲೀಸ್ ಅಧಿಕಾರಿಯ ಪುತ್ರಿ, ದರೋಡೆಕೋರನ ಪತ್ನಿ ಕಣಕ್ಕೆ!

07/09/2024

ಹಿರಿಯ ಪೊಲೀಸ್ ಅಧಿಕಾರಿಯ ಪುತ್ರಿ ಹಾಗೂ ದರೋಡೆಕೋರನೊಬ್ಬನ ಪತ್ನಿ ಮಂಜು ಹೂಡಾ ಅವರು ಹರಿಯಾಣದ ಗರ್ಹಿ ಸಂಪ್ಲಾ-ಕಿಲೋಯಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ರೋಹ್ಟಕ್ ಜಿಲ್ಲಾ ಪರಿಷತ್ತಿನ ಹಾಲಿ ಅಧ್ಯಕ್ಷರಾಗಿದ್ದಾರೆ.

ಬಲವಾದ ರಾಜಕೀಯ ಹಿನ್ನೆಲೆಯ ಹೊರತಾಗಿಯೂ ತನಗೆ ಜನರ ಬೆಂಬಲವಿದೆ ಎಂದು ಪ್ರತಿಪಾದಿಸಿದ ಮಂಜು, ಸದ್ಯ ಕಾಂಗ್ರೆಸ್ಸಿನ ಪ್ರಬಲ ವ್ಯಕ್ತಿ ಹೊಂದಿರುವ ಗರ್ಹಿ ಸಂಪ್ಲಾ-ಕಿಲೋಯಿ ಸ್ಥಾನವನ್ನು ಗೆಲ್ಲುವುದು ತನಗೆ ಸವಾಲಾಗುವುದಿಲ್ಲ ಎಂದು ಆಶಿಸಿದ್ದಾರೆ.

ಮಂಜು ಹೂಡಾ ಯಾರು?

ಮಂಜು ಹೂಡಾ ಅವರು ಒಂದೂವರೆ ವರ್ಷಗಳಿಂದ ರೋಹ್ಟಕ್ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ಅವರನ್ನು ವಿಧಾನಸಭಾ ಚುನಾವಣೆಗೆ ಆಯ್ಕೆ ಮಾಡಿದೆ.

ಆಕೆಯ ಪತಿ, ರಾಜೇಶ್ ಹೂಡಾ, ರೋಹ್ಟಕ್‌ನ ಪ್ರಸಿದ್ಧ ಶೀಟರ್ ಮತ್ತು ಪ್ರಬಲ ವ್ಯಕ್ತಿಯಾಗಿದ್ದಾರೆ. ಪ್ರಚಾರದ ಸಮಯದಲ್ಲಿ ವಿರೋಧ ಪಕ್ಷಗಳು ಈ ವಿಷಯವನ್ನು ಎತ್ತಲು ತಯಾರಿ ನಡೆಸುತ್ತಿದ್ರೆ ಮಂಜು ತನ್ನ ಗಂಡನ ಭೂತಕಾಲವು ತನ್ನ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಾದಿಸಿದ್ದಾರೆ.

ಮಂಜು ಅವರ ತಂದೆ ಪ್ರದೀಪ್ ಯಾದವ್ ಹರಿಯಾಣದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.ರಾಜೇಶ್ ಅವರನ್ನು ಮದುವೆಯಾದ ನಂತರ, ಆಕೆ ತನ್ನ ಹೆಸರನ್ನು ಮಂಜು ಯಾದವ್ ನಿಂದ ಮಂಜು ಹೂಡಾ ಎಂದು ಬದಲಾಯಿಸಿಕೊಂಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version