ನವೀಕರಣಗೊಂಡು ಕಂಗೊಳಿಸುತ್ತಿರುವ ಸಂತ ತೋಮಸರ ಪೊರೋನ ದೇವಾಲಯ ಉದ್ಘಾಟನೆಗೆ ಕ್ಷಣಗಣನೆ

udane st tomasar porona temple
03/05/2024

ಉದನೆ (ಶಿರಾಡಿ) :  ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯ ಬೆಂಗಳೂರು–ಮಂಗಳೂರು ಹೆದ್ದಾರಿ 75ರ ಮಗ್ಗುಳಲ್ಲಿ ಇರುವ ಶಿರಾಡಿ ಗ್ರಾಮದಲ್ಲಿ ಕಾಣುವ ಒಂದು ಚಿಕ್ಕ ಪ್ರದೇಶವೇ ಉದನೆ.

ಇಲ್ಲಿ ರಾರಾಜಿಸುವ ಭವ್ಯವಾದ ದೇವಾಲಯವೇ ಸಂತ ತೋಮಸರ ಈ ದೇವಾಲಯ. ಈ ದೇವಾಲಯವು ಕೇವಲ ಕ್ರೈಸ್ತ ವಿಶ್ವಾಸಿಗಳ ಆಶಾಕೇಂದ್ರವಾಗಿರದೆ, ಈ ಹೆದ್ದಾರಿಯಲ್ಲಿ ಸಂಚರಿಸುವ ಸಾವಿರಾರು ಭಕ್ತರ ಆಶಾಕೇಂದ್ರವಾಗಿದೆ.

1947 ರಿಂದ 1955 ರ ಒಳಗೆ ಸುಮಾರು 60 ಕುಟುಂಬಗಳು ಶಿರಾಡಿ ಗ್ರಾಮದ ವಿವಿಧ ಭಾಗಗಳಲ್ಲಿ ನೆಲೆಗೊಂಡರು.   ಅವರು ಮುಂದಿನ ತಲೆಮಾರುಗಳ ಹಲವು ಆಯಾಮಗಳಲ್ಲಿ ಬೆಳೆದು ಶೈಕ್ಷಣಿಕ, ಭೌತಿಕ, ಆಧ್ಯಾತ್ಮಿಕ, ಸಂಸ್ಕಾರಿಕ ಹಾಗೂ ಅಭಿವೃದ್ಧಿಗಾಗಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಠಿಣ ಪರಿಶ್ರಮಿಗಳಾದ ಪೂರ್ವಜರು ನಿಸ್ವಾರ್ಥ ಪ್ರಯತ್ನಗಳಿಂದ ಸಂತ ತೋಮಸರ ಅನುಯಾಯಿಗಳೆಂದು ಕರೆಯಲ್ಪಡುವ ಈ ಮಾರ್ ತೋಮ ಕ್ರಿಸ್ತರು ಇಂದು ಆರ್ಥಿಕವಾಗಿ ಸದೃಢವಾಗಿದೆ.

ಇಲ್ಲಿನ ಕ್ರೈಸ್ತ ವಿಶ್ವಾಸಿಗಳು ಆರಂಭಕಾಲದಲ್ಲಿ ತಮ್ಮ ಪ್ರಾರ್ಥನಾ ಅವಶ್ಯಕತೆಗಳಿಗಾಗಿ ಮುಳಿಹುಳ್ಳಿನ ಚಾವಣಿಯ ದೇವಾಲಯವನ್ನು ನಿರ್ಮಿಸಿದರು.

ದಿವ್ಯ ಬಲಿ ಪೂಜೆಗೆ ಕೊಕ್ಕಡದ ಸಂತ ಜೋನರ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಇವರು ತೆರಳುತಿದ್ದರು. ಕಾಲಕ್ರಮೇಣ ಕೊಕ್ಕಡದ ಧರ್ಮ ಗುರುಗಳು ಉದನೆಗೆ ಬಂದು ದಿವ್ಯ ಬಲಿ ಪೂಜೆಯನ್ನು ನೆರವೇರಿಸುತ್ತಿದ್ದರು. ಕ್ರಮೇಣ ಈ ದೇವಾಲಯವು ಹಂತ ಹಂತವಾಗಿ ಬೆಳೆದು ಇದೀಗ ಐದನೇ ಹಂತದಲ್ಲಿ ಸುಸಜ್ಜಿತ ಭವ್ಯ ದೇವಾಲಯವಾಗಿ ಉದನೆ ಮುಕುಟಮಣಿಯಂತೆ ರಾರಾಜಿಸುತ್ತ ಇಂದು ಉದ್ಘಾಟನೆಗೆ ಸಜ್ಜಾಗಿದೆ.

ಈ ದೇವಾಲಯವು ಬೆಳ್ತಂಗಡಿ ಧರ್ಮ ಪ್ರಾಂತ್ಯ ಅಧೀನದಲ್ಲಿ ಇದೆ.  ಪ್ರಭು ಏಸುಕ್ರಿಸ್ತರ ಕೃಪಾರ್ಶಿರ್ವಾದದಿಂದಲೂ ಸಂತ ತೋಮಸರ ಮಧ್ಯಸ್ಥಿಕೆಯಿಂದಲೂ ಹಾಗೂ ಉದಾರ ದಾನಿಗಳ ಸಹಕಾರದಿಂದಲೂ ಶಿರಾಡಿ ಗ್ರಾಮದ ಉದನೆಯಲ್ಲಿ ನವೀಕರಣಗೊಳ್ಳುತ್ತಿರುವ ಈ ಚರ್ಚಿನ ಜೀರ್ಣೋದ್ದಾರ ಕಾರ್ಯವು ಪೂರ್ಣಗೊಂಡಿದೆ.

ಮೇ 4 ರಂದು ಶನಿವಾರ  ಅಪರಾಹ್ನ 3:30ಕ್ಕೆ ಮುಖ್ಯ ಅತಿಥಿಗಳಾದ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ  — ರೆವ್.ಗೀವರ್ಗೀಸ್ ಮಾರ್ ಮಕಾರಿಯೋಸ್, ಮೋರ್ ಅಂತೋನಿಯೋಸ್ ಯಾಕೋಬ್ — ಮೆಟ್ರೋಪಾಲಿಟನ್ ಹೊನ್ನಾವರ ಮಿಷನ್ ಕರ್ನಾಟಕ, ಮೋರ್ ಕ್ರಿಸೊಸ್ಟೊಮೊಸ್ ಮಾರ್ಕೋಸ್ — ಮೆಟ್ರೋಪಾಲಿಟನ್ ಸಿರಿಯನ್ ಆರ್ಥೊಡಾಕ್ಸ್ ಚರ್ಚ್‌ನ ಇಎಇ ಆರ್ಚ್ ಡಯಾಸಿಸ್, ಇವರ ಸಮ್ಮುಖದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ- –  ಪರಮಪೂಜ್ಯ ಮಾರ್ ಲಾರೆನ್ಸ್ ಮುಕ್ಕುಯಿ ಅವರ ಯಾಜಕಾತ್ವದಲ್ಲಿ ನವ ನಿರ್ಮಿತ ದೇವಾಲಯದ ಉದ್ಘಾಟನೆ, ದೇವಾಲಯದ ಪವಿತ್ರಿಕರಣ, ದೇವಾಲಯ ಪ್ರತಿಷ್ಠಾಪನೆ, ವಿಜ್ರಂಭಣೆಯ ದಿವ್ಯ ಬಲಿ ಪೂಜೆ, ಸಭಾ ಕಾರ್ಯಕ್ರಮ ಸಹಭೋಜನ, ಗಾನಮೇಳ ನಡೆಯಲಿವೆ.  ಹಾಗೂ ಮೇ 5 ರಂದು ಸಂಜೆ 4 ರಿಂದ ಧರ್ಮ ಗುರುಗಳ ನೇತೃತ್ವದಲ್ಲಿ ವಿಜೃಂಭಣೆಯ ದಿವ್ಯ ಬಲಿ ಪೂಜೆ, ಲದೀಞ ಹಾಗೂ ಭವ್ಯ ಮೆರವಣಿಗೆ, ಸಹಭೋಜನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿವೆ ಎಂದು ಚರ್ಚಿನ ಧರ್ಮ ಗುರುಗಳಾದ – ಫಾ. ಸಿಬಿ ತೋಮಸ್ ಪನಚಿಕ್ಕಲ್ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version