ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಈ ದೇಶ ಬಲಗೊಳ್ಳುತ್ತದೆ: ರಾಹುಲ್ ಗಾಂಧಿ

ಉತ್ತರ ಪ್ರದೇಶ : ಶನಿವಾರ 35ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರ ಪ್ರದೇಶದ ವಾರಣಾಸಿಯ ಗೋಲೆಗಡ್ಡಾದಿಂದ ಪುನರಾರಂಭಗೊಂಡಿದೆ.
ರಾಹುಲ್ ಗಾಂಧಿ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದರು. ಪಕ್ಷದ ಬೆಂಬಲಿಗರು ಮತ್ತು ಅಪಾರ ಸಂಖ್ಯೆಯಲ್ಲಿ ಜನರು ರೋಡ್ ಶೋದಲ್ಲಿ ಭಾಗವಹಿಸಿದ್ದರು.
ಇಡೀ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ನಾನೆಂದೂ ದ್ವೇಷ ಕಂಡಿಲ್ಲ, ಬಿಜೆಪಿ, ಆರ್ ಎಸ್ ಎಸ್ ನವರು ಕೂಡ ಯಾತ್ರೆಗೆ ಬಂದಿದ್ದರು, ನಮ್ಮ ಬಳಿಗೆ ಬಂದ ತಕ್ಷಣ ನಮ್ಮೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದರು. ನಾವು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಈ ದೇಶ ಬಲಗೊಳ್ಳುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕೈ ನಾಯಕಿ ಮತ್ತು ಶಾಸಕಿ ಪಲ್ಲವಿ ಪಟೇಲ್ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಂಡರು. ಪಲ್ಲವಿ ಪಟೇಲ್ ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪಿ. ಮೌರ್ಯ ಅವರನ್ನು ಸೋಲಿಸಿದ್ದರು.
ನಿರುದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿಯೊಂದಿಗೆ ರಾಹುಲ್ ಗಾಂಧಿ ಮಾತನಾಡುವಾಗ, ನಿರುದ್ಯೋಗದ ವಿಷಯವನ್ನು ಪ್ರಸ್ತಾಪಿಸಿದರು. ಲಕ್ಷಗಟ್ಟಲೆ ಖರ್ಚು ಮಾಡಿ ವಿದ್ಯಾಭ್ಯಾಸ ಮಾಡಿಯೂ ಬರಿಗೈಲಿ, ಒಡೆದ ಕನಸುಗಳೊಂದಿಗೆ ಯುವಕ ಮತ್ತು ಆತನ ಕುಟುಂಬ ಹೇಗೆ ಅಲೆದಾಡುತ್ತಿದೆ. ಇದರ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ ಎಂದು ಅವರು ತಿಳಿಸಿದರು.