5:12 AM Saturday 18 - October 2025

ವಿಶ್ವದಲ್ಲೇ ಮೊದಲ ಬಾರಿಗೆ ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಸಾವು

william shakespeare
26/05/2021

ಲಂಡನ್:  ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದ  ಬ್ರಿಟನ್ ದೇಶದ ವಿಲಿಯಂಷೇಕ್ಸ್ ಪಿಯಾರ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

81 ವರ್ಷ ವಯಸ್ಸಿನ ವಿಲಿಯಂ ಷೇಕ್ಸ್ ಪಿಯಾರ್ ಕಳೆದ ವರ್ಷ ಡಿಸೆಂಬರ್ 8ರಂದು ಕೊವಿಡ್ 19 ಲಸಿಕೆ ಪಡೆದುಕೊಂಡಿದ್ದರು. ಅವರು ವಿಶ್ವದಲ್ಲಿಯೇ ಕೊವಿಡ್ ಲಸಿಕೆಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದರು.

ಯೂನಿವರ್ಸಿಟಿ ಆಸ್ಪತ್ರೆ ಕೋವೆಂಟ್ರಿ ಅಂಡ್‌ ವಾರ್ವಿಕ್‌ಶೈರ್‌ನಲ್ಲಿ ಅವರು ಜರ್ಮನಿಗೆ ಸೇರಿದ ಬಯೋಎನ್‌ಟೆಕ್‌, ಅಮೆರಿಕಾ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ದಿ ಪಡಿಸಿದ್ದ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ಅನಾರೋಗ್ಯ ಸಮಸ್ಯೆಗಳಿಂದ ಇದೇ ಆಸ್ಪತ್ರೆಗೆ ಸೇರಿದ್ದ ಷೇಕ್ಸ್‌ಪಿಯರ್ ಈ ತಿಂಗಳ 20 ರಂದು ಮೃತಪಟ್ಟರು ಎಂದು ಅವರ ಸ್ನೇಹಿತ ಜೈನ್ ಇನ್ನೆಸ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version