ಕೋವಿಶೀಲ್ಡ್ ಅಡ್ಡಪರಿಣಾಮ: ಕೊನೆಗೂ ಸತ್ಯ ಒಪ್ಪಿಕೊಂಡ ಕಂಪೆನಿ!

covishield
30/04/2024

ಹೃದಯಾಘಾತ, ಸಡನ್ ಡೆತ್ ಪ್ರಕರಣಗಳು ಇತ್ತೀಚೆಗೆ ದೇಶದ ಜನರನ್ನು ಬೆಚ್ಚಿಬೀಳಿಸಿತ್ತು.  ಏಕಾಏಕಿ ಜನರು ಸಾವಿಗೀಡಾಗಲು ಕೊವಿಡ್ ಲಸಿಕೆಯೇ ಕಾರಣ ಎಂದು ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿತ್ತು. ಇದೀಗ ಇದರ ಸತ್ಯಾಂಶ ಬಯಲಾಗಿದೆ.

ಕೋವಿಶೀಲ್ಡ್ ಔಷಧಿಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಮೊದಲ ಬಾರಿಗೆ ಸತ್ಯವನ್ನು ಒಪ್ಪಿಕೊಂಡಿದೆ.

ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟಾಗಬಹುದು ಎಂದು ಕಂಪೆನಿ ಒಪ್ಪಿಕೊಂಡಿದೆ. ಲಸಿಕೆ ಪಡೆದುಕೊಂಡವರಲ್ಲಿ ಟಿಟಿಎಸ್ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ.

ಟಿಟಿಎಸ್ ಕಾಣಿಸಿಕೊಳ್ಳುವುದು ಎಂದರೆ, ಬೋಸೈಟೋಪೆನಿಯಾ ಸಿಂಡ್ರೋಮ್.  ದೇಹದಲ್ಲಿ ರಕ್ತದ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಳ್ಳುವುದು, ಪಾರ್ಶ್ವವಾಯು, ಹೃದಯಸ್ತಂಭನ ಮಾತ್ರವಲ್ಲದೇ ಪ್ಲೇಟ್ ಲೆಟ್ ಗಳ ಸಂಖ್ಯೆ ಕೂಡ ಕಡಿಮೆ ಮಾಡುವ ಅಡ್ಡಪರಿಣಾಮ  ಲಸಿಕೆಯಿಂದ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ.

ಅಸ್ಟ್ರಾಜೆನೆಕಾಕೋವಿಡ್ ಲಸಿಕೆ ಪಡೆದ ಬಳಿಕ ಮೆದುಳು ಅಥವಾ ದೇಹದ ಇತರೆ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವುದು, ಪ್ಲೇಟ್ ಲೆಟ್​ ಗಳ ಸಂಖ್ಯೆ ಕಡಿಮೆಯಾಗುವುದ ಬಗ್ಗೆ ಬ್ರಿಟನ್ ನಿವಾಸಿ ಜೆಮಿ ಸ್ಕಾಟ್​ ದೂರು ನೀಡಿದ್ದರು. ಈ ದೂರಿನ ವಿಚಾರಣೆ ವೇಳೆ ಕಂಪೆನಿ ಸತ್ಯ ಬಾಯ್ಬಿಟ್ಟಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version