4:36 AM Friday 11 - September 2026

2.61 ಕೋಟಿ ರೂಪಾಯಿಗೆ ಹರಾಜಾದ ಹಸು | ವಿಶ್ವ ದಾಖಲೆ ಬರೆದ ಹಸು

08/02/2021

ಲಂಡನ್: 2.61 ಕೋಟಿ ರೂಪಾಯಿಗೆ ಹಸುವೊಂದು ಹರಾಜಾಗಿದ್ದು,  ಅತೀಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂದು ದಾಖಲೆ ಬರೆದಿದೆ. 2,62,000 ಪೌಂಡ್ಸ್ ಗೆ ಈ ಹಸು ಹರಾಜಾಗಿದ್ದು, ಇದು ಭಾರತದಲ್ಲಿ ಸುಮಾರು 2.61 ಕೋ.ರೂ. ಆಗುತ್ತದೆ.

ಮಧ್ಯ ಇಂಗ್ಲೆಂಡ್ ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿದ್ದು, ನಾಲ್ಕು ತಿಂಗಳ ಫೋಶ್ ಸ್ವೈಸ್ ತಳಿಯ ಈ ಹಸು ಮಾರಾಟ ಬೆಲೆಯಲ್ಲಿ ವಿಶ್ವ ದಾಖಲೆ ಬರೆದಿದೆ. 2014ರಲ್ಲಿ ಇದೇ ತಳಿಯ ಹದು ಮಾರಾಟವಾಗಿದ್ದು, ಈ ಬಾರಿ ಅದಕ್ಕಿಂತಲೂ ಅಧಿಕ ಬೆಲೆಗೆ ಹಸು ಮಾರಾಟವಾಗಿದೆ.

ಹೈನುಗಾರಿಕೆ ಮಾಡುತ್ತಿರುವ ಕ್ರಿಸ್ಟೀನ್ ವಿಲಿಯಮ್ಸ್  ಅವರ ತಂದೆ ಈ ತಳಿಯನ್ನು ಸಾಕಿದ್ದರು.  ತಂದೆಯ ನಿಧನದ ಬಳಿಕ ಕ್ರಿಸ್ಟೀನ್ ಈ ಹಸು ಸಾಕಣಿಕೆಯನ್ನು ಮುಂದುವರಿಸಿದ್ದಾರೆ.

ಇನ್ನೂ ಹಸು ದಾಖಲೆಯ ಬೆಲೆಗೆ ಮಾರಾಟವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಕ್ರಿಸ್ಟೀನ್ ಇಷ್ಟೊಂದು ದುಬಾರಿ ಬೆಲೆಗೆ ಹಸು ಮಾರಾಟವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನನಗೆ ಇಂದು ಬಹಳ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version