3:42 AM Monday 15 - September 2025

ಸಂಜೆ ವೇಳೆ ವ್ಯಕ್ತಿಗೆ ತಂಡದಿಂದ ಹಲ್ಲೆ, ಬೆಳಗ್ಗೆ ವ್ಯಕ್ತಿಯ ಮೃತದೇಹ ಪತ್ತೆ: ಶಿಬಾಜೆಯಲ್ಲಿ ವ್ಯಕ್ತಿಯ ಅಸಹಜ ಸಾವು!

shibaje
19/12/2022

ರಾತ್ರಿ ಶೆಡ್‌ ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಇಂದು ಬೆಳಗ್ಗೆ ತೋಟದ ಬದಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಶಿಬಾಜೆಯಲ್ಲಿ ನಡೆದಿದೆ.

ಮೃತರನ್ನು ಶಿವಾಜೆ ಗ್ರಾಮದ ನಿವಾಸಿ ಶ್ರೀಧರ ಎಂದು ಗುರುತಿಸಲಾಗಿದೆ. ಶ್ರೀಧರರಿಗೆ ಶನಿವಾರ ಸಂಜೆ ಸ್ಥಳೀಯರಾದ ತಿಮ್ಮಪ್ಪಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದಗೌಡ ಹಾಗೂ ಮಹೇಶ್ ಪೂಜಾರಿ ಎಂಬುವವರು ಹಲ್ಲೆ ನಡೆಸಿರುವುದನ್ನು ಸ್ಥಳೀಯರು ನೋಡಿದ್ದಾರೆನ್ನಲಾಗಿದೆ. ಬಳಿಕ ಶ್ರೀಧರ್ ತಾನು ಕೆಲಸ ಮಾಡುವ ಶೆಡ್‌ ಗೆ ತೆರಳಿ ಮಲಗಿದ್ದು, ಆದರೆ ಬೆಳಗ್ಗೆ ಶ್ರೀಧರ ಶೆಡ್ ‌ನಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಟ ನಡೆಸಿದಾಗ ತೋಟದ ಬದಿಯಲ್ಲಿ ಶ್ರೀಧರನ ಮೃತದೇಹ ಬಿದ್ದಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ತೋಟದ ಬೇಲಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಹಗಲು ಹಲ್ಲೆ ನಡೆಸಿದ ತಂಡವೇ ರಾತ್ರಿ ಅಕ್ರಮವಾಗಿ ಶೆಡ್‌ ಗೆ ಪ್ರವೇಶಿಸಿ ಶ್ರೀಧರ್‌ ರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿ ಶ್ರೀಧರ್‌ ರೊಂದಿಗೆ ಕೆಲಸ ಮಾಡುವ ಹರೀಶ್ ಮುಗೇರ ಎಂಬುವವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version