ದೀಪಾವಳಿ ದಿನದಂದೇ, ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಸಿದ ಪಾಪಿಗಳು!

ಭಿಂಡ್: ದೀಪಾವಳಿ ದಿನದಂದೇ ದಲಿತ ವ್ಯಕ್ತಿಯೊಬ್ಬನನ್ನು ಸರಪಳಿಯಿಂದ ಕಟ್ಟಿ ಹಾಕಿ ಅಮಾನವೀಯವಾಗಿ ಥಳಿಸಿ ಮೂತ್ರ ಕುಡಿಸಿರುವಚ ಅನಾಗರಿಕ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ನಂತರ ಸಂತ್ರಸ್ತ ದಲಿತ ವ್ಯಕ್ತಿ ಗ್ಯಾನ್ ಸಿಂಗ್ ಜಾತವ್ ಮೂವರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನನ್ವಯ ಮೂವರು ಆರೋಪಿಗಳನ್ನೂ ಬಂಧಿಸಲಾಗಿದೆ.
ಗ್ಯಾನ್ ಸಿಂಗ್ ಜಾತವ್ ಅಜುದ್ದಿಪುರ ನಿವಾಸಿಯಾಗಿದ್ದು, ಗ್ವಾಲಿಯರ್ ನ ಡಿಡಿ ನಗರದಲ್ಲಿ ಬೊಲೆರೊ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮೂವರು ಆರೋಪಿಗಳು ಆತನನ್ನು ಬೊಲೆರೊ ಓಡಿಸುವಂತೆ ಒತ್ತಾಯಿಸಿದರು. ಅದಕ್ಕೆ ನಿರಾಕರಿಸಿದಾಗ ಆತನನ್ನು ಥಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೋನು ಬರುವಾ, ಅಲೋಕ್ ಶರ್ಮಾ ಮತ್ತು ಛೋಟು ಎಂಬವರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ದೀಪಾವಳಿ ದಿನದಂದು ಗ್ಯಾನ್ ಸಿಂಗ್ ಅವರ ಮನೆಗೆ ನುಗ್ಗಿದ ಆರೋಫಿಗಳು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಭಿಂಡ್ ಗೆ ಕರೆದೊಯ್ದರು. ಆರೋಪಿಗಳು ಹಲವು ದಿನಗಳಿಂದ ತಮ್ಮ ಬೊಲೆರೊ ಓಡಿಸಲು ಬಿಡುವಂತೆ ಒತ್ತಾಯಿಸುತ್ತಿದ್ದರು. ಆದರೆ ಅವರು ನಿರಾಕರಿಸಿದರು. ಈ ವೇಳೆ ಸೆಮ್ರಾಪುರ ಬಳಿ ವಾಹನ ನಿಲ್ಲಿಸಿ, ಮೂವರು ವ್ಯಕ್ತಿಗಳು ಆತನನ್ನು ಕ್ರೂರವಾಗಿ ಥಳಿಸಿ, ನಂತರ ಬಲವಂತವಾಗಿ ಮೂತ್ರ ಕುಡಿಸಿದರು. ನಂತರ ಆತನನ್ನು ಭಿಂಡ್ ಗೆ ಕರೆದೊಯ್ದು, ಸೋನು ಬರುವಾ ಅವರ ಮನೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸರಪಳಿಯಿಂದ ಕಟ್ಟಿ, ಥಳಿಸಲಾಯಿತು. ಈ ವೇಳೆ ಗ್ರಾಮಸ್ಥರು ಮಧ್ಯಪ್ರವೇಶಿಸಿ ಗ್ಯಾನ್ ಸಿಂಗ್ ಜೀವ ಉಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD