ಮಾವನಿಗೆ ಸ್ಟೀಲ್ ವಾಕಿಂಗ್ ಸ್ಟಿಕ್ ನಿಂದ ಥಳಿಸಿದ ಸೊಸೆಯ ಬಂಧನ

mangole 1
12/03/2024

ಮಂಗಳೂರು: ವಯೋವೃದ್ಧ ಮಾವನಿಗೆ ಸ್ಟೀಲ್ ವಾಕಿಂಗ್ ಸ್ಟಿಕ್ ನಿಂದ ಅಮಾನುಷವಾಗಿ ಥಳಿಸಿದ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಕುಲಶೇಖರ ಎಂಬಲ್ಲಿ ಪದ್ಮನಾಭ ಸುವರ್ಣ ಎಂಬ 87 ವರ್ಷದ ವ್ಯಕ್ತಿಗೆ ಸೊಸೆ ಉಮಾ ಶಂಕರಿ ಎಂಬುವವರು ಥಳಿಸಿದ್ದಾರೆ. ಮಾರ್ಚ್ 9 ರಂದು ಘಟನೆ ನಡೆದಿದ್ದು, ವಾಕಿಂಗ್ ಸ್ಟಿಕ್ ಅನ್ನು ಬಳಸಿರುವುದರಿಂದ ವೃದ್ಧ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಪದ್ಮನಾಭ ಸುವರ್ಣ ಅವರಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತರ ಮಗಳು ನೀಡಿದ ದೂರಿನ ಮೇರೆಗೆ ಅತ್ತಾವರದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ (ಕೆಇಬಿ) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸೊಸೆ ಉಮಾ ಶಂಕರಿ ಅವರನ್ನು ಬಂಧಿಸಲಾಗಿದೆ.
ಸಂತ್ರಸ್ತರ ಪುತ್ರನಾಗಿರುವ ಆರೋಪಿಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version