10:49 PM Tuesday 21 - October 2025

ಶಾರೂಖ್ ಖಾನ್ ನ್ನು ಜೀವಂತವಾಗಿ ಸುಡುತ್ತೇನೆ: ಸ್ವಾಮೀಜಿಯಿಂದ ಕೊಲೆ ಬೆದರಿಕೆ

ayodhya seer
21/12/2022

ಇಂದು ನಾವು ಶಾರೂಖ್ ಖಾನ್ ನ ಪೋಸ್ಟರ್ ಸುಟ್ಟಿದ್ದೇವೆ. ಒಂದು ವೇಳೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದರೆ, ಜೀವಂತ ಸುಡುತ್ತೇನೆ ಎಂದು ಪರಮಹಂಸ ಆಚಾರ್ಯ ಸ್ವಾಮೀಜಿ ಶಾರೂಖ್ ಖಾನ್ ಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ.

ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂಬ ಬಲಪಂಥೀಯರ ವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸ್ವಾಮೀಜಿ ಬಹಿರಂಗವಾಗಿಯೇ ಶಾರೂಖ್ ಖಾನ್ ಗೆ ಜೀವ ಬೆದರಿಕೆಯೊಡ್ಡಿದ್ದಾರೆ.

ಪಠಾಣ್ ಚಿತ್ರ ಥಿಯೇಟರ್ ನಲ್ಲಿ ರಿಲೀಸ್ ಆದ್ರೆ ನಾನು ಆ ಸಿನಿಮಾ ಮಂದಿರಕ್ಕೆ ಬೆಂಕಿ ಇಡುತ್ತೇನೆ ಎಂದೂ ರಾಜಾರೋಷವಾಗಿ ಸ್ವಾಮೀಜಿ ಬೆದರಿಕೆಯಾಗಿದ್ದು, ಸ್ವಾಮೀಜಿಯ ಕೊಲೆಗಟುಕತನದ  ಹೇಳಿಕೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version