12:45 AM Friday 11 - September 2026

ದೇವರ ರಥದಡಿಯಲ್ಲಿ ಸಿಲುಕಿದ ಭಕ್ತ ಸಾವು!

13/03/2021

ಯಾದಗಿರಿ: ದೇವರ ರಥದಡಿಯಲ್ಲಿ ಸಿಲುಕಿದ ಭಕ್ತನೋರ್ವ ಒಂದು ವಾರಗಳ ಕಾಲ ಜೀವನ್ಮರಣ ಹೋರಾಟದ ಬಳಿಕ ಇಂದು ಸಾವನ್ನಪ್ಪಿದ್ದು,  ಮಾರ್ಚ್ 5ರಂದು ಗ್ರಾಮ ದೇವತೆ ರಥೋತ್ಸವದ ವೇಳೆ ಈ ಘಟನೆ ನಡೆದಿತ್ತು.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಥೋತ್ಸವದ ವೇಳೆ ರಮೇಶ್ ಎಂಬವರು ರಥದಡಿಗೆ ಸಿಲುಕಿದ್ದರು. ಜನಸಮೂಹದ ನೂಕಾಟ, ತಳ್ಳಾಟದಿಂದ ಆಯತಪ್ಪಿ ಅವರು ರಥದಡಿಗೆ ಬಿದ್ದಿದ್ದರು. ರಥದಡಿಗೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ರಥೋತ್ಸವದ ವೇಳೆ ಸೂಕ್ತ ಬಂದೋಬಸ್ತ್ ಒದಗಿಸದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಜನರ ಗುಂಪಿನ ನಡುವೆ ರಥವನ್ನು ಎಳೆಯುವ ಸಂದರ್ಭದಲ್ಲಿ ಇಂತಹ ಅಚಾತುರ್ಯಗಳು ನಡೆಯುತ್ತಿವೆ. ಇನ್ನೂ ಈ ಘಟನೆಗೆ ಪ್ರಾಣಿ ಬಲಿಯ ವಿಚಾರವಾಗಿಯೂ ಬಣ್ಣಕಟ್ಟಲಾಗಿದೆ ಎಂದು ಹೇಳಲಾಗಿದೆ. ಪ್ರಾಣಿಗಳನ್ನು ಕೊಲ್ಲದೇ ತಿನ್ನುವುದು ಹೇಗೆ? ಎನ್ನುವ ಪ್ರಶ್ನೆಗಳೂ ಇದರ ಹಿಂದೆ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version