7:38 PM Saturday 18 - October 2025

ದೆವ್ವ ಬಿಡಿಸುತ್ತೇನೆ ಎಂದವ ಯುವತಿಗೆ ಮತ್ತು ಬರುವ ಔಷಧಿ ನೀಡಿ ಎಂತಹ ಕೆಲಸ ಮಾಡಿದ್ದಾನೆ ನೋಡಿ

31/10/2020

ಚಿತ್ರದುರ್ಗ: ಮೂಢನಂಬಿಕೆಗಳನ್ನು ನಂಬಬೇಡಿ ಎಂದು ಜನ ಎಷ್ಟು ಹೇಳಿದರೂ ಕೇಳುವುದಿಲ್ಲ. ಈ ರೀತಿಯ ಬುದ್ಧಿ ಹೇಳಿದ ತಕ್ಷಣವೇ ನೀವು ನಾಸ್ತಿಕರು ಎಂದು ಬಹುತೇಕರು ಬುದ್ಧಿ ಹೇಳಿದವರಿಗೇ ಬುದ್ಧಿ ಹೇಳುತ್ತಾರೆ. ಆದರೆ ಕೊನೆಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ.


ಯುವತಿಯೊಬ್ಬಳನ್ನು ದೆವ್ವ ಬಿಡಿಸಲು ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋಗಲಾಗಿದ್ದು, ಮಂತ್ರವಾದಿಯು ಯುವತಿಗೆ ಮತ್ತು ಬರುವ ಔಷಧಿ ನೀಡಿ, ಆಕೆಯ ಪ್ರಜ್ಞೆ ತಪ್ಪಿಸಿ, ಅಶ್ಲೀಲ ವಿಡಿಯೋ ಮಾಡಿ ಬಳಿಕ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.


ಇನ್ನೂ ಆರೋಪಿಯನ್ನು ಭಾಸ್ಕರ್ ಎಂದು ಆರೋಪಿಸಲಾಗಿದೆ. ಯುವತಿಗೆ ಹಿಡಿದ ದೆವ್ವ ಬಿಡಿಸುತ್ತೇನೆ ಎಂದು ಹೇಳಿದ್ದವನು ಯುವತಿಯ ಅಶ್ಲೀಲ ಚಿತ್ರ ವಿಡಿಯೋ ಮಾಡಿಕೊಂಡು  ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಬಳಿಕ ತನ್ನನ್ನು ಮದುವೆಯಾಗುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದು, ಕೊನೆಗೆ ಯುವತಿಯನ್ನು ಪಾವಗಡಕ್ಕೆ ಕರೆದೊಯ್ದು ಮದುವೆಯಾಗಿದ್ದಾನೆ ಎಂದು ವರದಿಯಾಗಿದೆ.


ಇತ್ತೀಚಿನ ಸುದ್ದಿ

Exit mobile version