11:58 PM Monday 1 - September 2025

ಧರ್ಮಸ್ಥಳ ಪ್ರಕರಣ: RSS vs RSS ನಡುವಿನ ಜಗಳ: ಪ್ರಿಯಾಂಕ್ ಖರ್ಗೆ

priyank kharge (1)
01/09/2025

ಬೆಂಗಳೂರು:  ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಜೆಪಿಯಿಂದ ‘ಧರ್ಮಸ್ಥಳ ಚಲೋ’ ಹೆಸರಿನಲ್ಲಿ ಹೋರಾಟ ಆರಂಭವಾಗಿದೆ. ಇದೇ ವೇಳೆ ಬಿಜೆಪಿ ನಾಯಕರ ವಿರುಧ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಧರ್ಮಸ್ಥಳ ಕೇಸ್ ನಲ್ಲಿ ಬಿಜೆಪಿಯರೇ SIT ಆಗಬೇಕು, ತ‌ನಿಖೆ ಆಗಬೇಕು ಅಂತ ಹೇಳಿದ್ರು. SIT ಆದ ಮೇಲೆ ಇವರು ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಈಗ ತನಿಖೆ ನಡೆಯೋವಾಗ ಜ್ಞಾನೋದಯ ಆಗಿದೆಯೋ ಅಥವಾ ಯಾರಾದ್ರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ, ಒಟ್ನಲ್ಲಿ ಮಾತಾಡ್ತಿದ್ದಾರೆ ಎಂದರು.

ಷಡ್ಯಂತ ಆಗಿದೆ ಅಂತ ಹೇಳ್ತಿರೋದು, ಷಡ್ಯಂತ ಮಾಡಿರೋದು ಯಾರು? ಬಿಜೆಪಿ ಅವರು ತಿಮರೋಡಿ, ಗಿರಿಶ್ ಮಟ್ಟಣ್ಣನವರ್ ಬಗ್ಗೆ ಮಾತಾಡ್ತಿದ್ದಾರೆ. ಇವರೆಲ್ಲ ಯಾರ ಕೂಸುಗಳು? ಯಾರ ಗರಡಿಯಲ್ಲಿ ಬೆಳೆದ ವ್ಯಕ್ತಿಗಳು ಇವರು. ಇವೆರೆಲ್ಲ BJP, RSS ವ್ಯಕ್ತಿಗಳೇ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಮಟ್ಟಣ್ಣನವರ್ ಬಿಜೆಪಿ ಯುವ ಮೋರ್ಚಾದಲ್ಲಿ ಇದ್ದವರು. ಮರೆತು ಹೋಗಿದೆಯಾ? ಬಿಜೆಪಿ ಸ್ಥಳೀಯ ಮುಖಂಡರಿಗೆ ಇದು ಗೊತ್ತಿದೆ ಅಂತ ಹೇಳ್ತಿದ್ದಾರೆ. ಹೇಳಲಿ ಹಾಗಾದ್ರೆ. ತಿಮರೋಡಿ RSS ವ್ಯಕ್ತಿ, RSSಗೆ ಗೊತ್ತಿಲ್ಲದೇ ಇವೆಲ್ಲಾ ನಡೆಯುತ್ತದೆಯಾ? RSS ಜಗಳವನ್ನ ತನಿಖೆ ತಂದು ಹಚ್ಚೋದು ಸರಿಯಲ್ಲ ಅಂತ ಬಿಜೆಪಿ, RSS ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version