ಧರ್ಮಸ್ಥಳ ಕೇಸ್: ಎಸ್ ಐಟಿ ತನಿಖೆ ಪೂರ್ಣಗೊಳಿಸಲು ಸಮಯ ನಿಗದಿ ಮಾಡಿಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿಗೆ ತನಿಖೆ ಪೂರ್ಣ ಮಾಡಲು ಯಾವುದೇ ಸಮಯ ನಿಗದಿ ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತನಿಖೆ ತ್ವರಿತವಾಗಿ ಆಗಬೇಕು ಎಂದು ಹೇಳಿದ್ರೆ ಎಸ್‌ಐಟಿ ಅವರಿಗೆ ಅವರದ್ದೇ ಆದ ತೀರ್ಮಾನ ಇರುತ್ತದೆ. ಎಸ್‌ಐಟಿ ಅವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯೋವರೆಗೂ ಅವರು ಯಾವ ವಿಚಾರಗಳನ್ನು ಹೇಳುವ ಹಾಗೇ ಇಲ್ಲ. ನಾವು ಹೇಳೋ ಹಾಗೇ ಇಲ್ಲ ಎಂದರು.
ಸೌಜನ್ಯ ತಾಯಿ ಕೊಟ್ಟಿರುವ ದೂರು ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನ ಎಸ್ ಐಟಿ ಅವರು ಡಿಸೈಡ್ ಮಾಡ್ತಾರೆ. ಇದಕ್ಕೂ ಅದಕ್ಕೂ ಲಿಂಕ್ ಇದೆಯಾ? ಇಲ್ಲವಾ? ಹಾಗೂ ತನಿಖೆ ಮಾಡಬೇಕಾ? ಬೇಡವಾ? ಅಂತ ಎಸ್ ಐಟಿ ನಿರ್ಧರಿಸಿ ತನಿಖೆ ಮಾಡುತ್ತದೆ. ನಾವು ಅದನ್ನ ಹೇಳೋಕೆ ಸಾಧ್ಯವಿಲ್ಲ ಅಂತ ಹೇಳಿದರು.
ಧರ್ಮಸ್ಥಳ ಕೇಸ್ ತನಿಖೆ ಇಷ್ಟೇ ದಿನದಲ್ಲಿ ಮಾಡಿ ಅಂತ ಹೇಳಿಲ್ಲ. ಆದಷ್ಟೂ ಬೇಗ ತನಿಖೆ ಮಾಡಿ ಅಂತ ಹೇಳಿದ್ದೇವೆ. ಸಮಯ ನಿಗದಿ ಮಾಡೋಕೆ ಆಗೋದೇ ಇಲ್ಲ. ತನಿಖೆ ಹೇಗೆ ಹೋಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬೇಗ ಮುಗಿದರೆ ಬೇಗ ವರದಿ ಕೊಡ್ತಾರೆ. ತನಿಖೆ ಪೂರ್ತಿ ಮುಗಿಯುವವರೆಗೂ ಅವರು ತನಿಖೆ ಮಾಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.
ಎನ್ ಐಎ ತನಿಖೆಗೆ ಕೊಡಿ ಎಂಬ ವಿಪಕ್ಷಗಳ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ತನಿಖೆಗೆ ಕೊಡಬೇಕಾದರೂ ಈಗ ಇಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯೋ ಬಗ್ಗೆ ಯಾರದ್ದು ತಕರಾರಿಲ್ಲ. ಎಸ್ ಐಟಿ ತನಿಖೆ ಎಲ್ಲರೂ ಸ್ವಾಗತ ಮಾಡಿದ್ದಾರೆ. ಧರ್ಮಸ್ಥಳದ ಹೆಗ್ಗಡೆ ಅವರು ತನಿಖೆ ಸ್ವಾಗತ ಮಾಡಿದ್ದಾರೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD