ಧರ್ಮಸ್ಥಳದತ್ತ ಧರ್ಮ ಸಂರಕ್ಷಣಾ ಪಾದಯಾತ್ರೆ!

(Dharmasthala)ಕೊಟ್ಟಿಗೆಹಾರ: ಧರ್ಮಸ್ಥಳದ ವಿರುದ್ಧ ಹರಿದಾಡಿಸಲಾಗುತ್ತಿದೆ ಎಂದು ಆರೋಪಿಸಿ ಭಕ್ತಿ–ಏಕತೆಯ ಸಂದೇಶ ಸಾರಲು ಬೆಂಗಳೂರಿನ ಸಹೋದರರಾದ ಹೇಮಂತ್ ಮತ್ತು ಅನಿಲ್ ಕೊಟ್ಟಿಗೆಹಾರದಿಂದ ಧರ್ಮಸ್ಥಳದವರೆಗೆ ಕಾಲ್ನಡಿಗೆಯ “ಧರ್ಮ ಸಂರಕ್ಷಣಾ ಪಾದಯಾತ್ರೆ” ಕೈಗೊಂಡಿದ್ದಾರೆ.
ಬೆಳಗಿನ ಜಾವ ಕೊಟ್ಟಿಗೆಹಾರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದ ಇವರಿಗೆ ಭಕ್ತರ ಹಾರೈಕೆ ದೊರೆಯಿತು. “ವದಂತಿ ಸುಳ್ಳು. ಧರ್ಮಸ್ಥಳ ನಮ್ಮ ಭಕ್ತಿಯ ಕೇಂದ್ರ, ಎಲ್ಲರಿಗೂ ಸಮಾನ ಸೇವೆ ದೊರೆಯುವ ಸ್ಥಳ,” ಎಂದು ಹೇಮಂತ್ ಅಭಿಪ್ರಾಯಪಟ್ಟರು.
“ಡಾ. ವೀರೇಂದ್ರ ಹೆಗ್ಗಡೆ ಅವರ ತ್ಯಾಗಮಯ ಸೇವೆ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ಹಚ್ಚಿದೆ. ಅನ್ನಸತ್ರದಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಉಚಿತ ಊಟ, ಚಾರಿಟಬಲ್ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಸ್ವಾವಲಂಬನೆ ಯೋಜನೆಗಳ ಮೂಲಕ ಗ್ರಾಮೀಣ ಹಾಗೂ ಮಹಿಳೆಯರಿಗೆ ಬದುಕಿನ ಬೆಳಕು –- ಇವೆಲ್ಲ ಅವರ ಸೇವೆಯ ದೀಪಗಳು,” ಎಂದು ಅನಿಲ್ ಶ್ಲಾಘಿಸಿದರು.
“ಇಂತಹ ಮಹಾನ್ ಸೇವಕರನ್ನು ಪ್ರಶ್ನಿಸುವುದು ಅನ್ಯಾಯ. ನಾವು ಯುವಕರಾಗಿ ಅವರ ಸೇವೆಗೆ ಕೃತಜ್ಞರು. ವದಂತಿ ತಾತ್ಕಾಲಿಕ, ಆದರೆ ಸತ್ಯ ಶಾಶ್ವತ. ಈ ಪಾದಯಾತ್ರೆ ನಮ್ಮ ಭಕ್ತಿ ಹಾಗೂ ನಂಬಿಕೆಯನ್ನು ಶಾಂತಿಯುತವಾಗಿ ವ್ಯಕ್ತಪಡಿಸುವ ಹಾದಿ,” ಎಂದು ಸಹೋದರರು ಒಟ್ಟಾಗಿ ಅಭಿಪ್ರಾಯಪಟ್ಟರು.
ಧರ್ಮಸ್ಥಳ ತಲುಪಿದ ಬಳಿಕ ದೇವಸ್ಥಾನ ದರ್ಶನ ಮಾಡಿ ಸಮೂಹ ಪ್ರಾರ್ಥನೆ ಸಲ್ಲಿಸಲು ಸಹೋದರರು ಸಂಕಲ್ಪಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD