ಆಪರೇಷನ್ ಕಲಿಸಿದ್ದೇ ಬಿಜೆಪಿಯವರು, ಆಪರೇಷನ್ ಹಸ್ತ ಮಾಡೋದ್ರಲ್ಲಿ ತಪ್ಪೇನಿದೆ?: ಶಾಸಕ ಪುಟ್ಟರಂಗಶೆಟ್ಟಿ ಪ್ರಶ್ನೆ

puttaranga shetty
24/08/2023

ಚಾಮರಾಜನಗರ:  ರಾಜಕೀಯವನ್ನ ಕಲುಷಿತ ಮಾಡಿದವರೇ ಬಿಜೆಪಿಯವರು, ಅಧಿಕಾರಕ್ಕಾಗಿ ಎಲ್ಲೆಲ್ಲೋ ಇದ್ದವರನ್ನ ಹಿಡಿದಿಟ್ಟುಕೊಂಡಿದ್ದು ಯಾಕೆ?  ಬಾಡಿಗೆ ಸಿಪಾಯಿ ದೇಶ ಕಾಯ್ತಾನಾ ಅನ್ನೋ ಹಾಗೆ ಕಾಂಗ್ರೆಸ್ ನಲ್ಲಿ ಇದ್ದವರನ್ನ ಕರೆದುಕೊಂಡಿದ್ದು ಯಾಕೆ? ಇವತ್ತು ರಾಜಕೀಯವನ್ನ ಹೊಲಸೆಬ್ಬಿಸಿದವರೇ ಬಿಜೆಪಿಯವರು,  ಅದು ಅವರಿಗೆ ತಿರುಗು ಬಾಣ ಆಗಿದೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ಬಿಜೆಪಿಗರು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದಾರೆ,  ಆಪರೇಷನ್ ಮಾಡೋದನ್ನ ಕಲಿಸಿದವರೇ ಬಿಜೆಪಿಯವರು.  ರಾಜಕೀಯವನ್ನ ಕಲುಷಿತ ಮಾಡಿ, ಕಾಂಗ್ರೆಸ್ ಶಾಸಕರನ್ನ ಭ್ರಷ್ಟರನ್ನಾಗಿ ಮಾಡಿದವರೆ ಬಿಜೆಪಿಗರು.  ಈಗ ಅವರಿಗೆ ತಿರುಗು ಬಾಣವಾಗಿದೆ, ಆಪರೇಷನ್ ಹಸ್ತ ಮಾಡೋದ್ರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದ್ರು.

ಕಾಂಗ್ರೆಸ್ ನ 40 ಶಾಸಕರು ಬಿಜೆಪಿ ಸೇರ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಅವನ್ಯಾವನೋ ತಲೆ ಕೆಟ್ಟವನು ಹೇಳಿರ್ಬೇಕು. ನಮ್ಮ ಸರ್ಕಾರ ಬಂದು ಕೇವಲ ಮೂರು ತಿಂಗಳಾಗಿದೆ. ನಾವು ಐದು ಗ್ಯಾರಂಟಿಗಳನ್ನ ಜಾರಿಗೆ ತಂದಿದ್ದೇವೆ. ಇಂತಹ ಒಂದೇ ಒಂದು ಕಾರ್ಯಕ್ರಮ ತರಲಿಲ್ಲ ಅವ್ರು.  ನಾವು ಈಗಲೇ 136 ಜನ ಇದೀವಿ, ಯಾರನ್ನೂ ಕರೆಯುವ ಪ್ರಮೆಯವೇ ಇಲ್ಲ, ಕಾಂಗ್ರೆಸ್ ನವರು ಯಾರೂ ಹೋಗಲ್ಲ, ಅಲ್ಲಿನ ಸಿದ್ದಾಂತ ಒಪ್ತಿಲ್ಲ, ಅವರಿಗೆ ಬೆದರಿಕೆ ಹಾಕಿ ಕರೆಸಿಕೊಂಡಿದ್ರು, ಆದ್ರೆ, ಅವ್ರಿಗೆ ಯಾವುದೇ ಸ್ಥಾನಮಾನ ಕೊಡಲ್ಲ, ಅವರನ್ನು ಸೇರಿಸಿಕೊಳ್ಳೋದೆ ಸ್ಥಾನಮಾನ ಕೊಟ್ಟ ಹಾಗೆ ಎಂದ್ರು.

ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಆಗ್ಬಾರ್ದು ಅಂತ ಏನಿಲ್ಲ, ಕಾಂಗ್ರೆಸ್ ಅಂದ್ರೆ ಸರ್ವರಿಗೂ ಸಮಬಾಳು-ಸರ್ವರಿಗು ಸಮಪಾಲು. ದಲಿತರು ಮುಖ್ಯಮಂತ್ರಿ ಆಗ್ಬಾರ್ದು ಅಂತ ಏನಿಲ್ಲ, ಅವಕಾಶ ಸಿಕ್ಕರೆ ಆಗಲಿ. ದಲಿತರನ್ನ ಸಿಎಂ ಮಾಡೋದು ಬಿಡೋದು ಹೈ ಕಮಾಂಡ್ ಗೆ ಬಿಟ್ಟ ವಿಚಾರ, ಆದ್ರೆ ಸಂತೋಷ ಎಂದರು.

ಇತ್ತೀಚಿನ ಸುದ್ದಿ

Exit mobile version