3:45 AM Saturday 18 - October 2025

ಬೇಜಾರ್ ಆಗೋಕೆ ಡಿ.ಕೆ.ಶಿವಕುಮಾರ್ ಆಸ್ತಿ ಬರೆಸಿಕೊಂಡಿದ್ದೀವಾ?: ಸಚಿವ ಕೆ.ಎನ್.ರಾಜಣ್ಣ ಪ್ರಶ್ನೆ

kn rajanna
08/01/2025

ತುಮಕೂರು:  ಡಿನ್ನರ್ ಪಾರ್ಟಿ ಕ್ಯಾನ್ಸಲ್ ಆಗಿಲ್ಲ ಮುಂದೂಡಿದ್ದೀವಿ ಅಷ್ಟೇ ಎಂದು ಡಿನ್ನರ್ ಪಾರ್ಟಿ ವಿಚಾರವಾಗಿ ಕೆ.ಎನ್.ರಾಜಣ್ಣ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಹೈ ಕಮಾಂಡ್ ಹೇಳಿದಂತೆ ಗೊಂದಲ ಆಗೋದು ಬೇಡ. ಅದನ್ನ ಮುಂದೂಡಬೇಕು ಅಂತ ಹೇಳಿದೆ, ಅದ್ಕೆ ಪಾರ್ಟಿ ಮುಂದೂಡಿದ್ದೇವೆ ಎಂದು ಸಚಿವ ಎನ್ ರಾಜಣ್ಣ ತಿಳಿಸಿದ್ದಾರೆ.

ಡಿನ್ನರ್ ಪಾರ್ಟಿ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಬೇಜಾರ್ ಆಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೇಜಾರ್  ಆಗೋಕ್ಕೆ ಅವ್ರ ಆಸ್ತಿನಾ ಏನಾದ್ರೂ ಬರೆಸಿಕೊಂಡಿದ್ದೀರಾ? ಎಂದು ಮರು ಪ್ರಶ್ನೆ ಹಾಕಿದರು.

ಪ್ರೀ ಯೂನಿರ್ವಸಿಗಳಲ್ಲಿ ಎಸ್ಪಿ.ಎಸ್ಟಿ ಮಕ್ಕಳಿಗೆ ಹಾಸ್ಟೆಲ್,ಸೀಟು ಸಿಗ್ತಿಲ್ಲ. ಇಂತಹ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಲು ಮಿಟಿಂಗ್ ಕರೆದರೆ, ನೀವು ಮಾಡ್ಬೇಡಿ ಅಂದ್ರೆ ಎಂದು ಹೇಳಿದರು.

ಇವರೆಲ್ಲಾ ಎಸ್ಸಿ ಎಸ್ಟಿಗಳ ವಿರೋಧಿಗಳಾ? ಇವೆಲ್ಲಾ ಬಹಳಷ್ಟು ದಿನ ನಡೆಯೊದಿಲ್ಲ.  ಹಾಸ್ಟೆಲ್ ಸೀಟ್ ಸಿಗಲ್ಲ, ಸಣ್ಣಪುಟ್ಟ ಸಾಲ ಮಾಡಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ತಗೊಂಡವನಿಗೆ ಸ್ಕಾಲರ್ಶಿಪ್ ಇಲ್ಲ.  ಇದು ಎಸ್.ಸಿ – ಎಸ್ಟಿ ಮಕ್ಕಳ ಜ್ವಲಂತ ಸಮಸ್ಯೆ. ಇಂತಹ ಹತ್ತು ಹಲವಾರು ಸಮಸ್ಯೆಗಳಿವೆ.  ಇಂತಹವುಗಳ ಬಗ್ಗ ಚರ್ಚೆ ಮಾಡಲು ಮೀಟಿಂಗ್ ಕರೆದರೆ.   ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ಬಿಟ್ಟು , ಮಾಡ್ಬೇಡಿ ಅಂತ ಹೇಳೊದು ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ

Exit mobile version