ಟೈಟಲ್ ಅನಾವರಣ ವೇಳೆ ಅಡಚಣೆ: ಹನುಮಂತನ ಮೇಲೆ ರಾಜಮೌಳಿ ಕಿಡಿ
ಸಿನಿಮಾ ಟೈಟಲ್ ಅನಾವರಣದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಈ ವೇಳೆ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ದೇವರ ಮೇಲೆಯೇ ಮುನಿಸಿಕೊಂಡ ಘಟನೆ ನಡೆದಿದೆ.
‘ವಾರಣಾಸಿ’ ಟೈಟಲ್ ಅನಾವರಣ ಮಾಡಲು ದೊಡ್ಡ ಸ್ಕ್ರೀನ್ ಹಾಕಲಾಗಿತ್ತು. ಆದರೆ, ತಾಂತ್ರಿಕ ದೋಷ ಕಾಣಿಸಿಕೊಂಡಿತು. ಈ ಕಾರಣದಿಂದಲೇ ಕೆಲವು ಹೊತ್ತು ಟೈಟಲ್ ಟೀಸರ್ ಅನಾವರಣ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ಟೀಸರ್ ನ ತೋರಿಸಲಾಯಿತು.
ನಂತರ ಮಾತನಾಡಿದ ರಾಜಮೌಳಿ, ಮೊದಲ ತಮ್ಮ ಅಭಿಮಾನಿಗಳ ಬಳಿಯಲ್ಲಿ ಕ್ಷಮೆ ಕೇಳಿದರು. ನನಗೆ ದೇವರ ಮೇಲೆ ಅಂತಹ ನಂಬಿಕೆ ಏನೂ ಇಲ್ಲ. ಹನುಮಂತನ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂದು ನನ್ನ ತಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದರು. ಈ ತಾಂತ್ರಿಕ ಸಮಸ್ಯೆ ಆದಾಗ ನನಗೆ ಸಿಟ್ಟೇ ಬಂತು. ಈ ರೀತಿಯಾ ಅವನು ನನಗೆ ಸಹಾಯ ಮಾಡೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಪತ್ನಿ ಹನುಮಂತನ ದೊಡ್ಡ ಭಕ್ತೆ. ಗೆಳೆಯ ಎನ್ನುವ ರೀತಿಯಲ್ಲಿ ಅವಳು ಹನುಮಂತನ ಬಳಿ ಮಾತನಾಡುತ್ತಾ ಇರುತ್ತಾಳೆ. ನನಗೆ ಅವಳ ಮೇಲೂ ಕೋಪ ಬಂತು. ನನ್ನ ಪತ್ನಿಯ ಹನುಮಂತ ಈ ಬಾರಿ ಸಹಾಯ ಮಾಡುತ್ತಾನಾ ನೋಡೋಣ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























